janadhvani

Kannada Online News Paper

ವಿಸಾ ವ್ಯಾಪಾರ ಜಾಲ: ಖಾಸಗಿ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲು

ಕುವೈತ್ ಸಿಟಿ: ದೇಶಾದ್ಯಂತ ಸ್ವದೇಶೀಕರಣವನ್ನು ಬಲಪಡಿಸುವ ಸಲುವಾಗಿ ಜುಲೈ 1, 2018 ರಂದು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 3140 ವಿದೇಶಿಗರನ್ನು ವಜಾ ಮಾಡಲು ಕುವೈಟ್ ಆದೇಶ ಹೊರಡಿಸಿದೆ. ಸಿವಿಲ್ ಸರ್ವಿಸ್ ಕಮಿಷನ್ ಅಧ್ಯಕ್ಷ ಅಹ್ಮದ್ ಅಲ್ ಜಝೀರ್ ಅವರು ನಿವೃತ್ತಿ ಸೌಲಭ್ಯಗಳನ್ನು ನೌಕರರಿಗೆ ಪಾವತಿಸಲು ಆದೇಶ ನೀಡಿದರು.

ಸಾರ್ವಜನಿಕ ವಲಯವನ್ನು ದೇಶೀಕರಣಗೊಳಿಸುವ ಭಾಗವಾಗಿ ವಿದೇಶೀಯರನ್ನು ವಜಾ ಮಾಡಲಾದ ಖಾಲಿ ಹುದ್ದೆಗಳಿಗೆ ಬದಲಾಗಿ ಸ್ಥಳೀಯ ಜನರನ್ನು ನೇಮಕ ಮಾಡಲು ಸರಕಾರ ಸಲಹೆ ನೀಡಿದೆ.
ವೀಸಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪೆನಿಗಳ ವಿರುದ್ಧ 7,197 ಪ್ರಕರಣಗಳನ್ನು ಖಾಸಗಿ ಸಂಸ್ಥೆಗಳ ವಿರುದ್ದ ಹೂಡಲಾಗಿದೆ ಎಂದು ಲೇಬರ್ ಸಾಮಾಜಿಕ ಸಚಿವ ಹಿಂದ್ ಅಲ್-ಝುಬೀಹ್ ತಿಳಿಸಿದ್ದಾರೆ.

2014 ರಿಂದ ನೋಂದಾಯಿಸಲಾದ ಪ್ರಕರಣಗಳಲ್ಲಿ, 12 ಮಿಲಿಯನ್ ಕುವೈತ್ ದಿನಾರ್ಗಳು ಖಜಾನೆಗೆ ಲಭಿಸಿದೆ ಎಂದು ಅವರು ಹೇಳಿದರು.ದೇಶದಲ್ಲಿ ವೀಸಾ ವ್ಯವಹಾರವನ್ನು ತೆಗೆದು ಹಾಕಲು ಸರ್ವವಿಧ ಹಾದಿಗಳನ್ನು ಅವಲಂಭಿಸಲಾಗುವುದು ಎಂದು ಸಚಿವರು ಹೇಳಿದರು. ಹಲವು ವಿದೇಶಿಯರು 2,000 ಕುವೈತ್ ದಿನಾರ್ ಮತ್ತು ಇತರ ಖರ್ಚುಗಳನ್ನು ಭರಿಸಿ ಇಂತಹ ಕಾನೂನು ಬಾಹಿರ ವಿಸಾ ವ್ಯಾಪಾರ ಜಾಲಕ್ಕೆ ಸಿಲುಕಿದ್ದಾರೆ ಎಂದು ಸಚಿವರು ಹೇಳಿದರು.

error: Content is protected !! Not allowed copy content from janadhvani.com