janadhvani

Kannada Online News Paper

ಕಾನೂನು ವಿರುದ್ದ ವ್ಯಾಪಾರಕ್ಕೆ ಶಾರ್ಜಾ ಪುರಸಭೆಯಿಂದ ಬ್ರೇಕ್

ಶಾರ್ಜಾ: ನಕಲಿ ಸರಕುಗಳು ಮತ್ತು ಅವಧಿ ಮೀರಿದ ಆಹಾರವನ್ನು ಮಾರಾಟ ಮಾಡುವ ಕಾನೂನು ವಿರುದ್ದ ವ್ಯಾಪಾರವನ್ನು ಶಾರ್ಜಾ ಪುರಸಭೆಯು ನಿರ್ಬಂಧಿಸಿದೆ.ಶಾರ್ಜಾದ ವಿವಿಧ ಭಾಗಗಳಿಂದ ವಶಪಡಿಸಲಾದ ಉತ್ಪನ್ನಗಳನ್ನು ಮಾನವೀಯ ಸಂಸ್ಥೆಗಳ ಮೂಲಕ ಬಡವರಿಗೆ ನೀಡಲಾಯಿತು. ಉಪಯೋಗ ಶೂನ್ಯ ಉತ್ಪನ್ನಗಳನ್ನು ನಾಶಪಡಿಸಲಾಗಿದೆ.

ಮುನ್ಸಿಪಲ್ ಗ್ರಾಹಕರ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಖಾಲೀದ್ ಬಿನ್ ಫಲಾಹ್ ಅಲ್ ಸುವೈದಿ, ಅಂತಹ ಅಕ್ರಮ ಮಾರಾಟವನ್ನು ತಡೆಗಟ್ಟಲು 40 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.ಅಕ್ರಮ ವ್ಯಾಪಾರ ಸಂಸ್ಥೆಗಳು ತಮ್ಮ ತಾಯ್ನಾಡಿಗೆ ಪ್ರಯಾಣ ಬೆಳೆಸುವವರನ್ನು ಪ್ರಚೋದಿಸಿ ಕಾನೂನು ವಿರೋಧಿ ವ್ಯಾಪಾರ ಕಾರ್ಯಾಚರಣೆ ಮಾಡುತ್ತಿವೆ ಎಂದು ಅವರು ಹೇಳಿದರು.

ಈ ವ್ಯಾಪಾರಿಗಳಲ್ಲಿ ಹೆಚ್ಚಿನವರು ದೇಶದಲ್ಲಿ ಅಕ್ರಮವಾಗಿ ನೆಲೆಸಿದವರಾಗಿದ್ದಾರೆ. ಅನೇಕರು ಪೊಲೀಸರು ಹುಡುಕುತ್ತಿರುವ ಅಪರಾಧಿಗಳೂ ಆಗಿದ್ದಾರೆ. ಅಂತಹ ಚಟುವಟಿಕೆಗಳನ್ನು ಗಮನಿಸಿದರೆ 993 ಎಂಬ ನಂಬರ್‌ಗೆ ಕರೆ ಮಾಡಲು ಮುನಿಸಿಪಾಲಿಟಿಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com