ದುಬೈ: ಯಾತ್ರಾ ಮಧ್ಯೆ ಅಪಘಾತವನ್ನು ನೋಡಿದಾಗ ತನ್ನ ವಾಹನವನ್ನು ಬದಿಗೆ ಸರಿಸಿ ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಲಿ ವೀಕ್ಷಿಸುವುದು ಹಲವರ ವಾಡಿಕೆಯಾಗಿದೆ. ಸಮಯವಿಲ್ಲದವರು ವೇಗವನ್ನು ನಿಯಂತ್ರಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸಿ ತೆರಳುತ್ತಾರೆ. ಆದರೆ, ದುಬೈ ಪೊಲೀಸರು ಇಂತಹ ಕ್ರಮಗಳನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ನಿಲ್ಲುವವರಿಗೆ 1000 ದಂಡ ವಿಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ದುಬೈ-ಅಲ್ ಐನ್ ರಸ್ತೆಯಲ್ಲಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಿತಿ ಮೀರಿದ ವೇಗದಿಂದ ಬಂದ ವಾಹನವು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮತ್ತೊಂದು ವಾಹನಕ್ಕೆ ಗುದ್ದಿ ಒಂಭತ್ತು ಮಂದಿ ಗಾಯಗೊಂಡರು. ಆದರೆ ಅಪಘಾತ ಸಂಭವಿಸಿದ ಕೂಡಲೇ, ಹಲವರು ಅಲ್ಲಿ ಸೇರಿಕೊಂಡ ಕಾರಣ ಪೊಲೀಸ್ ಗಸ್ತು ವಾಹನ ಮತ್ತು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ತಲುಪಲು ಕಷ್ಟಪ್ಪಡುವಂತಾಗಿತ್ತು.
ಇದು ಅಮಾನವೀಯ ಕೃತ್ಯವೆಂದು ಪೊಲೀಸರು ವಿವರಿಸಿದರು. ಅಪಘಾತದಲ್ಲಿ ಗಾಯಗೊಂಡವರ ಜೀವಗಳಿಗೆ ಅಪಾಯ ಉಂಟಾಗುವ ಸಂಭವವಿದೆ.
ಅಲ್ ಐನ್ ಟ್ರಾಫಿಕ್ ನಿರ್ದೇಶಕ ಕರ್ನಲ್ ಅಹ್ಮದ್ ಅಲ್ ಸುವೈದಿ, ಸಂಚಾರಕ್ಕೆ ಅಡ್ಡಿಯುಂಟುಮಾಡುವ ಮತ್ತು ಅಂಬ್ಯುಲೆನ್ಸ್‌ಗೆ ತಲುಪಲು ಸಾಧ್ಯವಿಲ್ಲದಂತೆ ಮಾಡುವ ಈ ಅಮಾನವೀಯತೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದರು.
ಅಪಘಾತ ನಡೆದ ಪ್ರದೇಶದಲ್ಲಿ ನೋಡುತ್ತಾ ನಿಲ್ಲುವವರಿಗೆ ಪೆನಾಲ್ಟಿ ವಿಧಿಸುವ ಕಾನೂನು 2017 ರಿಂದ ದೇಶದಲ್ಲಿ ಜಾರಿಯಲ್ಲಿದೆ. ಇದೀಗ ಪೆನಾಲ್ಟಿಯನ್ನು 1000 ದಿರ್ಹಂಗೆ ಸಂಚಾರ ಅಧಿಕಾರಿಗಳು ಹೆಚ್ಚಿಸಿದ್ದಾರೆ.