ಪುತ್ತೂರು: ಕರ್ನಾಟಕ ಸುನ್ನೀ ಯುವ ಜನ ಸಂಘ( ಎಸ್ ವೈ ಎಸ್) ದ.ಕ ಈಸ್ಟ್ ಜಿಲ್ಲಾ ಸಮಿತಿಯ ಅಧೀನದ ಝೋನ್ ಹಾಗೂ ಸರ್ಕಲ್ ಸಮಿತಿಗಳ ಸಾಂತ್ವನ ಹಾಗೂ ಇಸಾಬ ವಿಭಾಗದ ಉಫಾದ್ಯಕ್ಷರುಗಳು,ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ‘ಇಸ್‌ಲ’ ಎಂಬ ಹೆಸರಿನ ವಿಶೇಷ ತರಬೇತಿ ಶಿಬಿರ ಉಪ್ಪಿನಂಗಡಿ ಸುನ್ನೀ ಸೆಂಟರ್‌ನಲ್ಲಿ ಶನಿವಾರ ನಡೆಯಿತು.
ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ರವರ ಸಭಾಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ಯಿಯಾಗಿ ಆಗಮಿಸಿ ದ ಖ್ಯಾತ ತರಬೇತುದಾರ ಉಮರ್ ಸಖಾಫಿ ಎಡಪ್ಪಾಲರವರು ತರಗತಿ ಮಂಡಿಸಿದರು.
ಜಿಲ್ಲಾ ವ್ಯಾಪ್ತಿಯ ಆರು ಝೋನ್ ಸಮಿತಿಗಳ ಸಾಂತ್ವನ ಹಾಗೂ ಇಸಾಬ ವಿಭಾಗದ ಉಫಾದ್ಯಕ್ಷರುಗಳು,ಮೂವತ್ತೈದು ಸರ್ಕಲ್‌ಗಳ ಕಾರ್ಯದರ್ಶಿಗಳು ಶಿಬಿರದಲ್ಲಿ ಪಾಲ್ಗೊಂಡು ಕ್ಯಾಂಪ್ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

ಎಸ್ ವೈ ಎಸ್ ಕರ್ನಾಟಕ ರಾಜ್ಯ ಸದಸ್ಯರಾದ ಹಮೀದ್ ಕೊಯಿಲ.ರಾಜ್ಯ ಸದಸ್ಯರು,ಈಸ್ಟ್ ಜಿಲ್ಲಾ ಪ್ರಧಾನಕಾರ್ಯದರ್ಶಿಯೂ ಆದ ಸ್ವಾಲಿಹ್ ಮುರ,ಜಿಲ್ಲಾ ದಅವಾ ಉಪಾಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಜಿಲ್ಲಾ ಸಾಂತ್ವನ ಇಸಾಬ ಉಪಾಧ್ಯಕ್ಷರಾದ ಉಸ್ಮಾನ್ ಸೋಕಿಲ,ಜಿಲ್ಲಾ ಸಾಂತ್ವನ ವಿಭಾಗದ ನಾಯಕರಾದ ಹಂಝ ಕಲಾರ,ಜಮಾಲುದ್ದೀನ್ ಲತೀಫಿ ಲಾಡಿ,ಯೂಸುಫ್ ಸಖಾಫಿ ಬೆಳಂದೂರು ಉಪಸ್ಥಿತರಿದ್ದರು.ಈಸ್ಟ್ ಜಿಲ್ಲಾ ಸಾಂತ್ವನ ಇಸಾಬ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿ,
ಧನ್ಯವಾದ ಅರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ