janadhvani

Kannada Online News Paper

ಎಸ್ ವೈ ಎಸ್ ಜಿಲ್ಲಾ ಇಸಾಬ ಸಾಂತ್ವನ ಇಸ್ಲಾ ಕ್ಯಾಂಪ್

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ದ. ಕ ಜಿಲ್ಲಾ ವೆಸ್ಟ್ ಅಧೀನದ ಝೋನ್, ಸರ್ಕಲ್ ಇಸಾಬ &ಸಾಂತ್ವನ ಉಪಾಧ್ಯಕ್ಷರು ಕಾರ್ಯದರ್ಶಿ ಗಳಿಗಾಗಿ ನಡೆಸಲಾದ’ ಇಸ್ಲಾ’ ಕ್ಯಾಂಪ್ ಮಂಗಳೂರಿನ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.

ಎಸ್ ವೈ ಎಸ್ ರಾಜ್ಯ ಇಸಾಬ &ಸಾಂತ್ವನ ಮುಖ್ಯಸ್ಥ ಬಹು ಖಲೀಲ್ ಮಾಲಿಕೀ ಬೋಳಂತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ ವೈ ಎಸ್ ದ. ಕ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದರು.

ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಸ್ತಾವನೆ ಗೈದರು.

ಪ್ರಖ್ಯಾತ ಟ್ರೈನರ್ ಉಮರ್ ಸಖಾಫಿ ಎಡಪ್ಪಾಲಂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಗತಿ ನಡೆಸಿಕೊಟ್ಟರು.

ಸಾಂತ್ವನ & ಇಸಾಬ ಜಿಲ್ಲಾ ಮುಖ್ಯಸ್ಥ ರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ಯೋಜನೆ ಗಳನ್ನು ಮಂಡಿಸಿದರು.

ಜಿಲ್ಲಾ ನಾಯಕರಾದ ನಝೀರ್ ಹಾಜಿ ಲುಲು, ಹಸನ್ ಪಾಂಡೇಶ್ವರ, ಹಕೀಂ ಪೂಮಣ್ಣು, ಜಬ್ಬಾರ್ ಕಣ್ಣೂರು, ಇಸ್ ಹಾಕ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

ಇಸಾಬ &ಸಾಂತ್ವನ ಕಾರ್ಯದರ್ಶಿ ಸಿ ಎಂ ಫಾರೂಕ್ ಶೇಡಿಗುರಿ ಸ್ವಾಗತಿಸಿ ವಂದಿಸಿದರು.