ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ರಾಜ್ಯ ಸರ್ಕಾರಕ್ಕೇ ನೇರ ಸವಾಲು
ಮಂಗಳೂರು: ಕರಾವಳಿಯಲ್ಲಿ ವಾರಗಳ ಒಳಗೆ ಹತ್ಯೆಯಾದ ಎರಡು ಪ್ರತ್ಯೇಕ ಘಟನೆಗಳು ರಾಜ್ಯದ ಗಮನ ಸೆಳೆದಿದ್ದು, ಕೋಮು ಬಣ್ಣ ಹಚ್ಚುವ ದೊಡ್ಡ ಷಡ್ಯಂತ್ರವೊಂದು ಬಿಲಸೇರಿದೆ. ಅಶ್ರಫ್ ಎಂಬ ಅಮಾಯಕ ಮಾನಸಿಕ ಅಸ್ವಸ್ಥ ನನ್ನು ಗುಂಪು ಹತ್ಯೆ ಮಾಡಿದ ಅಕ್ರಮಿಗಳ ಬಗ್ಗೆ ತುಟಿ ಬಿಚ್ಚದ ಮಾಧ್ಯಮಗಳು, ನಟೋರಿಯಸ್ ರೌಡಿ ಬಗ್ಗೆ ವ್ಯಾಪಕವಾದ ಪ್ರಚಾರ ಕೊಟ್ಟು ಕರಾವಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದೆ.
ಇದೀಗ ಆರೋಪಿಗಳ ಬಂಧನವಾಗಿದ್ದು, ಪ್ರತೀಕಾರದ ಗ್ಯಾಂಗ್ ವಾರ್ ಆಗಿ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ ಈ ನಡುವೆ ಕರಾವಳಿಯ ಮೂರಕ್ಕೂ ಹೆಚ್ಚು ಕಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಲೆಯತ್ನ ನಡೆದಿದ್ದು ಇದಕ್ಕೆ ಸ್ಪಷ್ಟವಾಗಿ ಜಿಲ್ಲೆಗೆ ಬೆಂಕಿ ಹಚ್ಙಲು ಪ್ರಯತ್ನಿಸಿದ ಮಾಧ್ಯಮಗಳು, ರಾಜಕಾರಣಿಗಳು, ಕೋಮುವಾದಿಗಳು ನೇರ ಹೊಣೆಗಾರರಾಗಿದ್ದಾರೆ.
ಕರಾವಳಿಯಲ್ಲಿ ನಿರಂತರವಾಗಿ ನಡೆಯುವ ಇಂತಹ ಕೋಮುದ್ವೇಷ ಗಲಭೆಗಳಿಗೆ ಬೆಂಕಿ ಹಚ್ಙುವ ದ್ವೇಷ ಭಾಷಣಗಳು ಪ್ರಮುಖ ಕಾರಣ. ಇದನ್ನು ಚಿವುಟಿ ಹಾಕಲು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳು ನಿಷ್ಕ್ರಿಯವಾಗಿದ್ದು ,ಯಾರಿಂದಲೂ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಆದ್ದರಿಂದ ಈ ಗಲಭೆಯ ಹಿಂದಿನ ಕೋಮು ಭಾಷಣಗಳನ್ನೂ , ಮಾಧ್ಯಮ ವರ್ತನೆಗಳನ್ನೂ ನಿಯಂತ್ರಣಕ್ಕೆ ತಾರದಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬಲುದೊಡ್ಡ ಬೆಲೆ ಭವಿಷ್ಯದಲ್ಲಿ ತೆರಬೇಕಾಗುತ್ತದೆಂದು ಅಲಿ ತುರ್ಕಳಿಕೆ ಎಚ್ಚರಿಸಿದರು.
ಸರ್ಕಾರ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಎಚ್ಚರಗೊಳ್ಳದಿದ್ದರೆ, ಕರ್ನಾಟಕ ರಾಜ್ಯ ಎಸ್ ಎಸ್ ಎಫ್, ಆಡಳಿತ ಸರ್ಕಾರವನ್ನು ಎಚ್ಚರಿಸಲು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಅಲಿ ತುರ್ಕಳಿಕೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ