janadhvani

Kannada Online News Paper

ಅಕ್ಷಯ ಚಾರಿಟೇಬಲ್ ಟ್ರಸ್ಟ್: ಉಚಿತ ನೋಟ್ ಪುಸ್ತಕ ವಿತರಣೆ

ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ವತಿಯಿಂದ ದಿನಾಂಕ:- 09 -06 -2024 ಆದಿತ್ಯವಾರದಂದು ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ಆಯ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮ ಕೆ ಪಿ ಬೈಲ್ ನಲ್ಲಿ ನಡೆಸಲಾಯಿತು.

ಅಬ್ದುಲ್ ಹಮೀದ್ ಮುಸ್ಲಿಯಾರ್ ದುಃಅ ನೆರವೇರಿಸಿದರು. ಕೊಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಉಪಾಧ್ಯಕ್ಷ ರಝಾಕ್ ಸಿ.ಹೆಚ್ ,ಕೋಶಾಧಿಕಾರಿ ಲತೀಫ್ ಪರ್ತಿಪ್ಪಾಡಿ, ಮಸ್ಚಿದುಲ್ ಅಹ್ಮದುಲ್ ಬದ್ಹವಿ ಪ್ರಧಾನ ಕಾರ್ಯದರ್ಶಿ ಹೈದರ್ ಕೆ ಪಿ , ಕೋಶಾಧಿಕಾರಿ ರಫೀಕ್ ಕೆ ಪಿ, ರಹ್ಮಾನಿಯಾ ಜುಮಾ ಮಸೀದಿಯ ನಾರ್ಶ ಇದರ ಮುಅಲ್ಲಿಮ್ ಫಾರೂಕ್ ಝುಹುರಿ, ಅಮ್ಟೂರು ಜುಮಾ ಮಸೀದಿಯ ಮುಅಲ್ಲಿಮ್ ಅಝೀಝ್ ಹಿಮಮಿ, ಉಮ್ಮರ್ ಕೆ ಪಿ ಬೈಲ್, ಹಸೈನಾರ್ ಕೆ ಪಿ ಬೈಲ್ , ಮುಸ್ತಫಾ ಕೆ ಪಿ ಬೈಲ್, ಝಕರಿಯಾ ಕೆ ಪಿ ಬೈಲ್, ಸಂಸುದ್ದೀನ್ ಕೆ ಪಿ ಬೈಲ್, ಮತ್ತು ಎಸ್ ವೈ ಎಸ್ ಕೆ ಪಿ ಬೈಲ್ ಶಾಖಾ ಕಾರ್ಯದರ್ಶಿ ಹಾರೀಸ್ ಕೆ ಪಿ ಬೈಲ್ ಹಾಗೂ ಇನ್ನಿತರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು , ಊರಿನ ನಾಗರಿಕರು ಉಪಸ್ಥಿತಿದ್ದು, ಮಸ್ಚಿದುಲ್ ಅಹಮ್ಮದುಲ್ ಬದ್ಹವಿ ಪ್ರಧಾನ ಕಾರ್ಯದರ್ಶಿ ಹೈದರ್ ಕೆ ಪಿ , ಕೋಶಾಧಿಕಾರಿ ರಫೀಕ್ ಕೆ ಪಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ. ಜಿಲ್ಲೆ ಇದರ ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com