ಉಳ್ಳಾಲ: ಸುನ್ನೀ ಯುವಜನ ಸಂಘ (SჄS) ಕಿನ್ಯ ಸರ್ಕಲ್ ವಾರ್ಷಿಕ ಕೌನ್ಸಿಲ್ ಸಭೆಯು ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ ರವರ ದುಆ ದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಪರಮಾಂಡ ಬಿ.ಎಂ ಇಸ್ಮಾಈಲ್ ಹಾಜಿ ಉದ್ಘಾಟಿಸಿದರು.
ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ ವಾರ್ಷಿಕ ವರದಿಯನ್ನು ಹಾಗೂ ಸರ್ಕಲ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ದೇರಳಕಟ್ಟೆ ಝೋನ್ ನಿಂದ ವೀಕ್ಷಕರಾಗಿ ಆಗಮಿಸಿದ ದಅವಾ ಕಾರ್ಯದರ್ಶಿ ಹೈದರ್ ಹಿಮಮಿ ಮಲಾರ್ ಕೌನ್ಸಿಲ್ ಪ್ರಕ್ರಿಯೆ ಯನ್ನು ಉತ್ತಮವಾಗಿ ನಡೆಸಿ ಕೊಟ್ಟರು,ಕಿನ್ಯ ಸರ್ಕಲ್ ನಾಯಕ ಹನೀಫ್ ಸಖಾಫಿ ಖುತುಬಿನಗರ ಮುನ್ನುಡಿ ಭಾಷಣ ನಡೆಸಿದರು.
ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಕೋಶಾಧಿಕಾರಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ, ದೇರಳಕಟ್ಟೆ ಝೋನ್ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಮ,ಸೋಶಿಯಲ್ ಕಾರ್ಯದರ್ಶಿ ಉಸ್ಮಾನ್ ಪಜೀರ್,ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಸಮಿತಿ ಅಧ್ಯಕ್ಷ ಇರ್ಫಾನ್ ಸಖಾಫಿ ಖುತುಬಿನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
KCF ನಾಯಕ ರಿಯಾಝ್ ಕುರಿಯ,SჄS ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಬಾಕಿಮಾರ್,ಇಸಾಬ ಕಾರ್ಯದರ್ಶಿ ಬಷೀರ್ ಲತೀಫಿ ಕುರಿಯ ಹಾಗೂ ಸರ್ಕಲ್ ವ್ಯಾಪ್ತಿಯ ಏಳು ಯುನಿಟ್ ಗಳ ಕೌನ್ಸಿಲರ್ ಗಳು ಭಾಗವಹಿಸಿದ್ದರು,ಸರ್ಕಲ್ ಸಮಿತಿ ಉಪಾಧ್ಯಕ್ಷ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಸ್ವಾಗತಿಸಿ ದಅವಾ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ ಧನ್ಯವಾದ ಸಲ್ಲಿಸಿದರು.