ದುಬೈ: ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಸಂಸ್ಥೆಯು ಯುಎಇ ಯಲ್ಲಿ ವಿದ್ಯುಕ್ತವಾಗಿ ಪ್ರಾರಂಭವಾಯಿತು. ಯುಎಇಯಾದ್ಯಂತ ನೆಲೆಸಿರುವ ಕಲ್ಲಡ್ಕದ ಎಲ್ಲಾ ಅನಿವಾಸಿ ಉದ್ಯೋಗಿಗಳನ್ನು ಒಂದೇ ಸೂರಿನಡಿಗೆ ತರವ ಮಹತ್ವದ ಪ್ರಯತ್ನವಾಗಿದೆ ಇದು. ಈ ಹಿಂದಿನಿಂದಲೇ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು , ಈ ಮೊದಲು ಕಲ್ಲಡ್ಕ ಸ್ನೇಹ ಕೂಟ ಸಮ್ಮಿಲನ ಎಂಬ ಹೆಸರಲ್ಲಿ ಅನಿವಾಸಿಗಳಿಗೆ ಕ್ರೀಡಾಕೂಟವನ್ನು ಏರ್ಪಡಿಸಿತ್ತು ಮತ್ತು ಕಳೆದ ರಮಝಾನ್ ತಿಂಗಳಲ್ಲಿ ಕಲ್ಲಡ್ಕ ಪರಿಸರದ ಮಸೀದಿಗಳಲ್ಲಿ ಇಫ್ತಾರ್ ಕೂಟಗಳನ್ನೂ ಆಯೋಜಿಸಲಾಗಿತ್ತು.
ಸಂಸ್ಥೆಯ ಸಮಿತಿ ರಚನೆ ಕಾರ್ಯಕ್ರಮವು ದುಬೈ ದೇರಾದಲ್ಲಿರುವ ಕಾಸರ್ಗೋಡ್ ಹೋಟೆಲ್ ನಲ್ಲಿ ನಡೆಯಿತು
ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಇದರ 2024 -25 ಸಾಲಿನ ಅಧ್ಯಕ್ಷರಾಗಿ ಮಹಮ್ಮದ್ ನವಾಝ್ ಗೋಳ್ತಮಜಲ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ
ರಫೀಕ್ ಸಾಹೇಬ್ ನೆಕ್ಕರಾಜೆಯವರನ್ನು ನೇಮಿಸಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಮಿಕ್ದಾದ್ ಗೋಳ್ತಮಜಲ್ ಇವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಪಿಲಿಂಜ ಕಲ್ಲಡ್ಕ, ಸಂಸ್ಥೆಯ ಕಾರ್ಯಕ್ರಮಗಳ ಉಸ್ತುವಾರಿಯಾಗಿ
ನಾಸಿರ್ ಕೆ.ಸಿ ರೋಡ್ ಕಲ್ಲಡ್ಕ, ಖಜಾಂಚಿಯಾಗಿ ಫಯಾಝ್ ಕಲ್ಲಡ್ಕ, ಮಾಧ್ಯಮ ವಕ್ತಾರರಾಗಿ ಕೆ.ಕೆ ಜಬ್ಬಾರ್ ಕೆ.ಸಿ ರೋಡ್ ಕಲ್ಲಡ್ಕ, ಸಮಿತಿ ಸದಸ್ಯರಾಗಿ ಝುಲ್ಫಿಕರ್ ಕಲ್ಲಡ್ಕ , ಇರ್ಷಾದ್ ಗೋಳ್ತಮಜಲ್ , ಮಹಮ್ಮದಾಲಿ ಕಲ್ಲಡ್ಕ , ಫಾರೂಕ್ ಕಲ್ಲಡ್ಕ , ಆಯ್ಕೆಯಾದರು.
ನಾಸಿರ್ ಕೆ ಸಿ ರೋಡು ಸಭಿಕರನ್ನು ಸ್ವಾಗತಿಸಿ, ಮಾದರಿ ನಾಯಕ ಹೇಗಿರಬೇಕು ಎಂಬುದರ ಕುರಿತು ವಿವರಿಸಿದರು. ಅಹ್ಮದ್ ಮಿಕ್ಡಾದ್ ಕಾರ್ಯಕ್ರಮ ನಿರೂಪಿಸಿದರು.