janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ವಾರ್ಷಿಕ ಕೌನ್ಸಿಲ್

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ರಿ) SSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆ ಜೂನ್ 9ರಂದು ಕೂರತ್ ಮದ್ರಸಾ ಸಭಾಂಗಣದಲ್ಲಿ ಜರುಗಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಗಳೂ ಆದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆಶೀರ್ವಚನೆಗೈದರು.

SSF ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಕಡಬ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೂರತ್ ಜುಮಾ ಮಸೀದಿಯ ಮುದರ್ರಿಸರಾದ ಅಬ್ದುಲ್ ಖಾದರ್ ಹನೀಫೀ ಅಲ್ ಫಾಳಿಲಿ ಉದ್ಘಾಟಿಸಿದರು.

ರಾಜ್ಯ ಸಮಿತಿ ಸದಸ್ಯರಾದ ತೌಸೀಫ್ ಅಸ್ಅದಿ ಮತ್ತು ರಶೀದ್ ಮಾಸ್ಟರ್ ಮಡಂತ್ಯಾರು ವೀಕ್ಷಕರಾಗಿದ್ದರು. SSF ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯ 6 ಡಿವಿಷನ್ ಗಳ ಆಯ್ದ ಕಾರ್ಯಕರ್ತರು ಕೌನ್ಸಿಲರ್ಸ್ ಗಳಾಗಿ ಭಾಗವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ನವಾಝ್ ಮಾವಿನಕಟ್ಟೆ ಸಾಂಘಿಕ ಅವಧಿಯ ವರದಿ ಮತ್ತು ಜಿಲ್ಲಾ ಫಿನಾನ್ಸ್ ಕಾರ್ಯದರ್ಶಿ ಮುಸ್ತಫಾ ಉರುವಾಲುಪದವು ಲೆಕ್ಕಪತ್ರ ಮಂಡಿಸಿದರು. ಮುಂದಿನ ಸಾಂಘಿಕ ಅವಧಿಯಲ್ಲಿನ ಸಕ್ರಿಯತೆಗಾಗಿ ಸಮಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಯಿತು.

ಪ್ರಸ್ತುತ ಜಿಲ್ಲಾ ಸಮಿತಿ: ಮುಹಮ್ಮದ್ ಮಿಸ್ಬಾಹಿ ಕಡಬ (ಅಧ್ಯಕ್ಷರು) ಮುಸ್ತಫಾ ಉರುವಾಲುಪದವು (ಪ್ರಧಾನ ಕಾರ್ಯದರ್ಶಿ) ಹಕೀಂ ಕಳಂಜಿಬೈಲ್ (ಫಿನಾನ್ಸ್ ಕಾರ್ಯದರ್ಶಿ) ರಶೀದ್ ಮಾಸ್ಟರ್ ಮಡಂತ್ಯಾರು (ಕ್ಯಾಬಿನೆಟ್) ಮಶ್ಹೂದ್ ಸಅದಿ (ಕ್ಯೂ.ಡಿ) ಇಸ್ಹಾಕ್ ಮದನಿ (ಸಿ.ಸಿ) ಶಿಹಾಬುರ್ರಹ್ಮಾನ್ ಮಾಸ್ಟರ್ ಪುತ್ತೂರು (ಕ್ಯಾಂಪಸ್) ಸ್ವಬಾಹ್ ಹಿಮಮಿ ಬೀಜಕೊಚ್ಚಿ (ಮೀಡಿಯಾ) ಜಂಶಾದ್ ಕಂಬಳಬೆಟ್ಟು (ವಿಸ್ಡಂ) ಇಕ್ಬಾಲ್ ಮಾಚಾರ್ (ಐ.ಟಿ) ಶರೀಫ್ ಕಲ್ಲಾಜೆ (ರೀಡ್ ಪ್ಲಸ್) ತೌಸೀಫ್ ಅಸ್ಅದಿ (ದಅವಾ) ಶಫೀಖ್ ಸಅದಿ (ರೈಂಬೋ) ಶರೀಫ್ ಸಖಾಫಿ ಉಜಿರ್‌ಬೆಟ್ಟು, ಸಿದ್ದೀಖ್ ಹಿಮಮಿ ಸುಳ್ಯ, ರಫೀಖ್ ಬಾಹಸನಿ ರೆಂಜ, ಶಫೀಖ್ ಮಾಸ್ಟರ್ ತಿಂಗಳಾಡಿ, ಹಸೈನಾರ್ ನೆಲ್ಲಿಕಟ್ಟೆ, ನವಾಝ್ ಮಾವಿನಕಟ್ಟೆ, ಇಕ್ಬಾಲ್ ನೀರುಕಟ್ಟೆ, ಉಬೈದುಲ್ಲಾಹ್ ಬೋವು, ಅತಾವುಲ್ಲಾಹ್ ಹಿಮಮಿ ಕುಪ್ಪೆಟ್ಟಿ, ಸ್ವಾದಿಖ್ ಮಾಸ್ಟರ್ ಕಲ್ಲುಗುಂಡಿ, ಮುಬೀನ್ ಉಜಿರೆ, ನಿಯಾಝ್ ಎಲಿಮಲೆ, ಮುಹ್ಸಿನ್ ಕಟ್ಟತ್ತಾರು, ರಿಯಾಝ್ ನೆಕ್ಕಿಲ, ಇಬ್ರಾಹೀಂ ಕೋಡಪದವು, ಇಸ್ಹಾಕ್ ಬೆಳ್ತಂಗಡಿ (ಸದಸ್ಯರು). ಇಕ್ಬಾಲ್ ಮಾಚಾರ್ ಸ್ವಾಗತಿಸಿ ಮುಸ್ತಫಾ ಉರುವಾಲುಪದವು ವಂದಿಸಿದರು.

error: Content is protected !! Not allowed copy content from janadhvani.com