ಸುಹೈಲಾ ನೀನೆಷ್ಟು ಭಾಗ್ಯವತೀ..
ಎಲ್ಲರೊಂದಿಗೂ ದುಆ ಮಾಡಲು ಹೇಳಿ, ಎಲ್ಲರ ಆಶೀರ್ವಾದ ಪಡೆದು, ಈ ಲೋಕದಿಂದ ವಿದಾಯ ಪಡೆದಯೆಲ್ಲಾ..
ಮರಣವನ್ನು ಕಣ್ಣ ಮುಂದೆ ಕಂಡಂತೆ ಎಲ್ಲವನ್ನು ಮಾಡಿ ಮುಗಿಸಿ, ಹೊರಟು ಬಿಟ್ಟೆಯಲ್ಲಾ.
ಮರ್ಕಝ್ ವಿಮೆನ್ಸ್ ಕಾಲೇಜಿಗೆ ಸುಹೈಲಾ ಬಂದಾಗ ಮೊದಲು ಹೇಳಿದ್ದು ನನಗೆ ಒಳ್ಳೆಯ ಹಾದಿಯಾ ಆಗಬೇಕು.
ನನ್ನಿಂದ ಅನೇಕರಿಗೆ ಹಿದಾಯತ್ ಲಭಿಸಬೇಕು.
ಅಲ್ ಹಂದುಲಿಲ್ಲಾಹ್.
ಸುಹೈಲಾ ಏನನ್ನು ಉದ್ದೇಶಿಸಿದಲೋ ಅದೇ ರೀತಿ ವಿದ್ಯಾರ್ಥಿ ಜೀವನವನ್ನು ನಡೆಸಿದಳು. ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದಳು.
ಉಸ್ತಾದರೊಂದಿಗೆ, ಟೀಚರ್ಸ್‌ಗಳೊಂದಿಗೆ, ಸಹಪಾಠಿಗಳೊಂದಿಗೆ ಅವಳ ನಡವಳಿಕೆಯ ಆ ರೀತಿಯಾಗಿತ್ತು.
ಸ್ಕೂಲ್‌ನಲ್ಲಿ ಯಾವಾಗಲೂ ಒಂದನೇ ಸ್ಥಾನದಲ್ಲಿದ್ದಳು. ಟೀಚರ್ಸ್‌ಗಳು ಅವಳಿಗೆ ಕೊಟ್ಟ ಕೆಲಸಗಳನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದಳು.
ಮರ್ಕಝ್‌ನ ಅತ್ಯಂತ ಉತ್ತಮ ಸಂಭ್ರಮ, ಹೆಣ್ಣುಮಕ್ಕಳ ಬುರ್ದಾ ಮಜ್ಲಿಸ್.
ಅದರಲ್ಲಿ ಸುಹೈಲಾ ಕೋರ್ಡಿನೇಟರ್ ಆಗಿ ಕಾರ್ಯ ನಿರ್ವಹಿಸಿದಳು.
ಪ್ರತೀ ವಾರ ತಪ್ಪದೇ ಎರಡು ದಿವಸ ಬುರ್ದಾ ಮಜ್ಲಿಸ್ ನಡೆಸುತ್ತಿದ್ದಳು.
ಅದಕ್ಕೆ ನೇತೃತ್ವ, ದುಆ, ಅಟೆಂಡೆನ್ಸ್ ಎಲ್ಲವೂ ಅವಳೇ..
ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.
ಒಮ್ಮೆ ಅವಳು ಹೇಳಿದಳು.
ಉಸ್ತಾದ್ ಇದೆಲ್ಲಾ ಮಾಡುವುದು ಹಬೀಬ್ ﷺ ರೊಂದಿಗೆ ಸ್ನೇಹದಿಂದ ಮಾತ್ರ..
ಆ ಮಾತು ಹೇಳುವಾಗ ಅವಳ ಕಣ್ಣಲ್ಲಿ ಕಣ್ಣೀರು ಹರಿದಿತ್ತು. ಆ ಸ್ನೇಹ ಅವಳು ಜೀವನವಿಡೀ ಅನುಭವಿಸಿದಳು.
ಒಂದು ದಿನ ಆಫೀಸಿಗೆ ಬಂದವಳು ಸಂತೋಷದಿಂದ ಅಳುತ್ತಿದ್ದಳು. ಅಳು ತಡೆಯಲಾಗುತ್ತಿಲ್ಲ. ಮಾತನಾಡಲು ಸಾಧ್ಯವಾಗುತ್ತಿಲ್ಲ.
ಉಸ್ತಾದ್ ನಾನು ನಿನ್ನೆ ರಾತ್ರಿ ಮುತ್ತು ನಬಿ ﷺ ರನ್ನು ಕಂಡೆ.
ಎಷ್ಟೊಂದು ಭಾಗ್ಯವತೀ ಸುಹೈಲಾ
ಮತ್ತೊಂದು ದಿನ ಅವಳು ಹೇಳಿದಳು.
ಉಸ್ತಾದ್ ಮದೀನಕ್ಕೆ ಹೋಗಲು ನನಗೆ ಸಾಧ್ಯನಾ ?
ಅಲ್ಲಿ ಹೋಗಿ ರಸೂಲ್ ﷺ ರ ಮುಂದೆ ಹೇಗೆ ನಿಲ್ಲುವುದು ?
ಒಂದು ವೇಳೆ ಮುತ್ತು ನಬಿ ﷺ ರ ಹತ್ತಿರ ಹೋದರೆ ನನ್ನ ಹೃದಯ ಒಡೆಯಬಹುದು.
ಅವಳ ಆಸೆಯಂತೆ ಎಲ್ಲವೂ ನೆರವೇರಿತು.
ಗಂಡ ಹಾಫಿಳ್ ಶರಫುದ್ದೀನ್ ಸಖಾಫಿ ಮತ್ತು ಇಬ್ಬರು ಮಕ್ಕಳ ಜೊತೆ ಉಮ್ರಾಕ್ಕೆ ಹೊರಟಳು. ಎರಡು ಉಮ್ರಾ ನಿರ್ವಹಿಸಿ. ಮೂರನೇ ಉಮ್ರಾಕ್ಕೆ ತಯಾರಿ ನಡೆಸಿದಳು.
ಇಬ್ಬರು ಮಕ್ಕಳನ್ನು ಸ್ನಾನ ಮಾಡಿಸಿ. ಸ್ನಾನ ಮಾಡುವುದು ಹೇಗೆಂದು, ಬಾತ್ ರೂಮ ನಲ್ಲಿ ಶುದ್ದಿ ಮಾಡುವುದು ಹೇಗೆಂದು ಮಕ್ಕಳಿಗೆ ಚೆನ್ನಾಗಿ ತಿಳಿಸಿಕೊಟ್ಟಳು.
ಇನ್ನೂ ಮುಂದೆ ನೀವೇ ಈ ಕಾರ್ಯ ಮಾಡಬೇಕೆಂದು ಮಕ್ಕಳಿಗೆ ಹೇಳಿಕೊಟ್ಟಳು.
ಉಮ್ರಾಕ್ಕೆ ಹೊರಡುವಾಗ ಮಕ್ಕಳನ್ನು ಆಲಂಗಿಸಿ ಮುದ್ದಿಸಿದಳು. ಇನ್ನೊಮ್ಮೆ ಇಲ್ಲಿಗೆ ಬರುತ್ತೆನೆಂದು ಯಾರಿಗೆ ಗೊತ್ತು ಎಂದು ಗಂಡನಲ್ಲಿ ಹೇಳಿದಳು.
ಅದಾಗಲೇ ಗಂಡನಿಗೆ ಏನೋ ಅಪಾಯದ ಮುನ್ಸೂಚನೆ ಸಿಕ್ಕಿತು.
ತವಾಫ್ ಮುಗಿಸಿ, ಹಜರುಲ್ ಅಸ್ವದ್ ಚುಂಬಿಸಿ, ಮಖಾಂ ಇಬ್ರಾಹೀಂನ ಹಿಂದೆ ಗಂಡನ ಜೊತೆ ನಮಾಝ್ ಮಾಡಿದಳು.
ನಂತರ ತನ್ನ ಜೊತೆ ಉಮ್ರಾಕ್ಕೆ ಬಂದ ಎಲ್ಲಾ ಮಹಿಳೆಯರನ್ನು ಕರೆಸಿ ದುಆ ಮಾಡಿದಳು. ಎಲ್ಲರೊಂದಿಗೂ ಪೊರುತ್ತ ಕೇಳುತ್ತಾ, ದುಆ ಮಾಡುತ್ತಾ ಈ ಜಗತ್ತಿಗೆ ವಿದಾಯ ಹೇಳಿದಳು.
ಇನ್ನಾಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್.
✍️ಅಬೂ ರಾಝೀ