janadhvani

Kannada Online News Paper

ಉಮ್ರಾ ಯಾತ್ರಾರ್ಥಿ 25 ವರ್ಷದ ಯುವತಿ ಕುಸಿದು ಬಿದ್ದು ಮೃತ್ಯು

ಕತಾರ್‌ನಿಂದ ಹೊರಡುವ ಅರಫಾತ್ ಉಮ್ರಾ ಗ್ರೂಪಿನ ಸದಸ್ಯರಾಗಿ ಸುಹೈಲಾ ಮಕ್ಕಾಗೆ ಪ್ರಯಾಣ ಬೆಳೆಸಿದ್ದರು.

ಮಕ್ಕತುಲ್ ಮುಕರ್ರಮಃ: ಕತಾರ್‌ನಿಂದ ಉಮ್ರಾ ಮಾಡಲು ತೆರಳಿದ್ದ ಗ್ರೂಪಿನ ಯುವತಿಯೊಬ್ಬರು ಮಕ್ಕಾದಲ್ಲಿ ಮೃತಪಟ್ಟಿದ್ದಾರೆ. ಕೇರಳದ ಕಣ್ಣೂರು ಮಯ್ಯಿಲ್ ಕುಟಿಯಾಟೂರು ಮೂಲದ ಸುಹೈಲಾ (25) ಉಮ್ರಾ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತನ್ನ ಪತಿ ಶರಫುದ್ದೀನ್ ಸಖಾಫಿ ತಳಿಪರಂಬ್ ಅಮೀರಾಗಿರುವ ಕತಾರ್‌ನಿಂದ ಹೊರಡುವ ಅರಫಾತ್ ಉಮ್ರಾ ಗ್ರೂಪಿನ ಸದಸ್ಯರಾಗಿ ಸುಹೈಲಾ ಮಕ್ಕಾಗೆ ಪ್ರಯಾಣ ಬೆಳೆಸಿದ್ದರು.

ಭಾನುವಾರ ರಾತ್ರಿ ಹರಮ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಬೆಳಗ್ಗೆ ಮರಣ ಸಂಭವಿಸಿದೆ. ಸಂದರ್ಶಕ ವೀಸಾದಲ್ಲಿ ಕತ್ತಾರಿಗೆ ಬಂದು ಅಲ್ಲಿಂದ ಉಮ್ರಾಗೆ ತೆರಳಿದ್ದರು. ತಂದೆ: ಅಬ್ದುಲ್ ರಹ್ಮಾನ್. ತಾಯಿ: ಕುಂಞಾಮಿನಾ. ಮಕ್ಕಳು: ರಹಮತ್ (ಆರು ವರ್ಷ) ಮತ್ತು ಮುಹಮ್ಮದ್ (ಐದು ವರ್ಷ). ಮೃತದೇಹವನ್ನು ಮಕ್ಕಾದಲ್ಲಿಯೇ ದಫನ ಮಾಡಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಉಸ್ತಾದ್ ನನಗೆ ಮದೀನಾಕ್ಕೆ ಹೋಗಲು ಸಾಧ್ಯನಾ ?- ರಸೂಲ್ ﷺ ರನ್ನು ಅಗಾಧವಾಗಿ ಪ್ರೀತಿಸಿದ ಯುವತಿಯ ಮನ ಕಲಕುವ ಸ್ಟೋರಿ

error: Content is protected !! Not allowed copy content from janadhvani.com