ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)
ಮಂಗಳೂರು: ಕರ್ನಾಟಕ ಸರಕಾರದ ಸಭಾಪತಿ, ಶಾಸಕ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಕೆಲವು ಬೇಡಿಕೆಗಳನ್ನು ಮುಂದಿಟ್ಟೆ.
ಪ್ರಾಮಾಣಿಕವಾಗಿ ಅವುಗಳನ್ನು ಆಲಿಸಿ, ಯು.ಟಿ.ಖಾದರ್ ಅವರು ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.
(ಬೇಡಿಕೆಗಳು)
1)ಮುಂದಿನ ಚುನಾವಣೆಯಲ್ಲಿ
ಅನಿವಾಸಿ ಭಾರತೀಯರಿಗೆ ಆನ್ಲೈನ್ ಮೂಲಕ ಮತದಾನ ಮಾಡುವ ವ್ಯವಸ್ಥೆ ಮಾಡಬೇಕು.
2)ಭಾರತದ ಆರ್ಥಿಕತೆಗೆ ಶಕ್ತಿ ತುಂಬಿದ, ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಸರಕಾರದಿಂದ ಆರ್ಥಿಕ ನೆರವು ನೀಡಬೇಕು.
3)2024 ರ ಲೋಕಸಭಾ ಚುನಾವಣೆಯಲ್ಲಿ
85 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದ ಮತ ಚಲಾಯಿಸಲು ಅನುವು ಮಾಡಿದಂತೆ, ಜೈಲಿನಲ್ಲಿರುವ ಕೈದಿಗಳಿಗೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ಬಾಣಂತಿಯರಿಗೂ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು.
ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿ ಈ ಬೇಡಿಕೆಗಳನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಬೇಕೆಂದು ವಿನಂತಿಸಿದೆ.