janadhvani

Kannada Online News Paper

ಉದ್ಯೋಗಕ್ಕಾಗಿ ಸೌದಿಗೆ ತಲುಪಿದ ಒಂದೂವರೆ ತಿಂಗಳಲ್ಲೇ ಯುವ ಇಂಜಿನಿಯರ್ ಮೃತ್ಯು

ರಿಯಾದ್: ನ್ಯೂ ಸನಯ್ಯಾದಲ್ಲಿನ ಖಾಸಗಿ ಕಾರ್ಖಾನೆಯೊಂದರಲ್ಲಿ ತಂತ್ರಜ್ಞರಾಗಿದ್ದ ತ್ರಿಶೂರ್‌ನ ಯುವ ಇಂಜಿನಿಯರ್ ಹೃದಯಾಘಾತದಿಂದ ರಿಯಾದ್‌ನಲ್ಲಿ ನಿಧನರಾಗಿದ್ದಾರೆm ದಖಿಕಾತುಶೇರಿ ತಾಮೆಕ್ಕಾಡ್ ಮೂಲದ ಸುರ್ಜಿಲ್ ಕೃಷ್ಣ (30) ಮೃತರು. ಶುಕ್ರವಾರ ರಾತ್ರಿ ಶೌಚಗೃಹಕ್ಕೆ ತೆರಳಿದ ಅವರು ವಾಪಸ್ ಬಾರದೆ ಇದ್ದ ಹಿನ್ನೆಲೆಯಲ್ಲಿ ಜತೆಯಲ್ಲಿದ್ದವರು ನೋಡಿದಾಗ ಅಸ್ವಸ್ಥ ಸ್ಥಿತಿಯಲ್ಲಿದ್ದರು.

ಕೂಡಲೇ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ. ಆಟೋಮೊಬೈಲ್ ಎಂಜಿನಿಯರ್ ಆಗಿರುವ ಸರ್ಜಿಲ್ ಒಂದೂವರೆ ತಿಂಗಳ ಹಿಂದೆ ರಿಯಾದ್‌ಗೆ ಕೆಲಸಕ್ಕೆ ಬಂದಿದ್ದರು.
ಪೋಷಕರು ಮತ್ತು ಕಿರಿಯ ಸಹೋದರರನ್ನು ಒಳಗೊಂಡಿರುವ ಸಾಮಾನ್ಯ ಕುಟುಂಬದ ಸದಸ್ಯ ಸರ್ಜಿಲ್ ಅವರ ಮದುವೆಯನ್ನು ನಿಶ್ಚಯಿಸಲಾಗಿತ್ತು.

error: Content is protected !! Not allowed copy content from janadhvani.com