janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್ ಸೆಕ್ಟರ್ ಸಮ್ಮೇಳನ- ಪವಿತ್ರ ಮದೀನಾದಲ್ಲಿ ಪೋಸ್ಟರ್ ಬಿಡುಗಡೆ

ಮದೀನತುಲ್ ಮುನವ್ವರಃ|ಕೆಸಿಎಫ್ ದುಬೈ ನಾರ್ತ್ ಝೋನ್ ಅಧೀನದ ಐದು ಸೆಕ್ಟರ್ ನಲ್ಲಿ ನಡೆಯಲಿರುವ ಸೆಕ್ಟರ್ ಸಮ್ಮೇಳನದ ಪೋಸ್ಟರ್ ಇತ್ತೀಚಿಗೆ ಪವಿತ್ರ ಮದೀನಾದಲ್ಲಿ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಗೌರವಾನ್ವಿತ ಅಧ್ಯಕ್ಷರು ಹಝ್ರತ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಕೆಸಿಎಫ್ ಅಂತರಾಷ್ಟ್ರೀಯ ಸಾಂತ್ವನ ವಿಭಾಗ ಚೈರ್ಮ್ಯಾನ್ ರೈಸ್ಕೊ ಅಬೂಬಕರ್ ಹಾಜಿ, ಅಬ್ದುಲ್ ರಝಾಕ್ ಹಾಜಿ ಜಲ್ಲಿ, ನಲ್ಕ ಅಬ್ದುಲ್ಲಾ ಹಾಜಿ, ಮೆಹಬೂಬ್ ಸಖಾಫಿ ಕಿನ್ಯ, ದುಬೈ ನಾರ್ತ್ ಝೋನ್ ಅಧ್ಯಕ್ಷರು ಇಸ್ಮಾಯಿಲ್ ಹಾಜಿ ಮದನಿ ನಗರ ಹಾಗೂ ಇತರರು ಭಾಗವಹಿಸಿದ್ದರು.

ದುಬೈ ನಾರ್ತ್ ಅಧೀನದ ಸೆಕ್ಟರ್ ಗಳ ಸಮ್ಮೇಳನಗಳು ಈ ಕೆಳಗಿನ ದಿನಾಂಕಗಳಲ್ಲಿ ನಡೆಯಲಿದೆ:

  • ಮುರಾರ್ ಮತ್ತು ಕಿಸೈಸ್ ಸೆಕ್ಟರ್ ಎಪ್ರಿಲ್ 28
  • ನೈಫ್ ಸೆಕ್ಟರ್ ಮೇ 4
  • ಹೊರ್ಲ್ಅನ್ಝ್ ಸೆಕ್ಟರ್ ಮೇ 5
  • ನಖೀಲ್ ಸೆಕ್ಟರ್ ಮೇ 12