ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಬಿ. ಶೇಕಡಾ 96.16 ಅಂಕದೊಂದಿಗೆ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ
ಕನ್ನಡ 99, ಇಂಗ್ಲಿಷ್ 94, ಇತಿಹಾಸ 98, ಅರ್ಥಶಾಸ್ತ್ರ 95 , ಸಮಾಜಶಾಸ್ತ್ರ 97 ಮತ್ತು ರಾಜ್ಯ ಶಾಸ್ತ್ರ 94 ಅಂಕಗಳೊಂದಿಗೆ ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆಯ 577 ಅಂಕ ಪಡೆದು ಗ್ರಾಮೀಣ ಪ್ರದೇಶದ ಕಾಲೇಜಿಗೆ ಕೀರ್ತಿ ತಂದುಕೊಟ್ಟಿದ್ದಾರೆ.
ಇವರು ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀಮತಿ ಸರೋಜ ಮತ್ತು ಶ್ರೀ ವಸಂತ ದಂಪತಿಗಳ ಪುತ್ರಿ.