ಮಂಗಳೂರು – ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಇದರ ಅಧೀನದಲ್ಲಿ ನಡೆದ 5ನೇ ತರಗತಿಯ ಪಬ್ಲಿಕ್ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕ ಪಡೆಯುವ ಮೂಲಕ ಮದೀನತುಲ್
ಉಲೂಮ್ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಇದರ ಐದನೇ ತರಗತಿ ವಿಧ್ಯಾರ್ಥಿ ಮುಹಮ್ಮದ್ ಸಹದ್ ಕೈಕಂಬ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.ಈತ ಮೊಹಮ್ಮದ್ ಶರೀಫ್ ಮತ್ತು ಶಾಹಿದಾ ದಂಪತಿಗಳ ಪುತ್ರನಾಗಿದ್ದಾನೆ . ಸದ್ರಿ ಪರೀಕ್ಷೆಯಲ್ಲಿ ಶಿಝಾ ನಫೀಸಾ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕೈಕಂಬ ರೇoಜ್ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಲೆ .ಈಕೆ ಅಬ್ದುಲ್ ರಹ್ಮಾನ್ ಬದ್ರಿಯಾ ಮತ್ತು ಝೀನತ್ ದಂಪತಿಗಳ ಪುತ್ರಿಯಾಗಿದ್ದಾಳೆ .
ವಿಧ್ಯಾರ್ಥಿಗಳ ಅಮೋಘ ಸಾಧನೆಗೆ ಕಾರಣೀಕರ್ತರಾದ ಮದ್ರಸ ಪ್ರಾಂಶುಪಾಲರಾದ K.H.U ಶಾಫಿ ಮದನಿ ಉಸ್ತಾದ್ ಕರಾಯ, ತರಗತಿ ಅಧ್ಯಾಪಕರಾದ ನೌಷಾದ್ ಮದನಿ ಕುಕ್ಕಿಲ ಮತ್ತು ಬದ್ರಿಯಾ ಜುಮಾ ಮಸ್ಜಿದ್ & ಮದೀನತುಲ್
ಉಲೂಮ್ ಮದ್ರಸ ಕುಪ್ಪೆಪದವು ಇದರ ಆಡಳಿತ ಸಮಿತಿಗೆ ಮತ್ತು ರಕ್ಷಕರಿಗೆ SJM ಕೈಕಂಬ ರೇಂಜ್ ಪ್ರತ್ಯೇಕ ಅಭಿನಂದನೆ ಸಲ್ಲಿಸಿದೆ.