janadhvani

Kannada Online News Paper

ಇರಾನ್, ಇಸ್ರೇಲ್ ದೇಶಗಳಿಗೆ ಪ್ರಯಾಣ ನಿಷೇಧಿಸಿದ ಭಾರತ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣ ನಿಷೇಧವನ್ನು ಘೋಷಿಸಿದೆ.

ಸಂಘರ್ಷದ ಅಪಾಯದ ಕಾರಣ ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣಿಸದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತೀಯರಿಗೆ ಸಲಹೆ ನೀಡಿದೆ.

ಸಂಭವನೀಯ ಇರಾನ್-ಇಸ್ರೇಲ್ ಸಂಘರ್ಷದ ಸಂದರ್ಭದಲ್ಲಿ, ಮುಂದಿನ ಸೂಚನೆ ಬರುವವರೆಗೆ ಈ ಎರಡು ದೇಶಗಳಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಈ ಎರಡು ದೇಶಗಳಲ್ಲಿ ನೆಲೆಸಿರುವವರು ಆದಷ್ಟು ಬೇಗ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ತಿಳಿಸಲಾಗಿದೆ.