janadhvani

Kannada Online News Paper

ಆಷ್ಟ್ರೇಲಿಯಾ: ಶಾಪಿಂಗ್ ಮಾಲ್ ನಲ್ಲಿ ದಾಳಿ, ಐವರು ಸಾವು

ಸಿಡ್ನಿ: ಇಲ್ಲಿನ ಶಾಪಿಂಗ್ ಮಾಲ್‌ನಲ್ಲಿ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಐದು ಮಂದಿಯನ್ನು ಇರಿದು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ದಾಳಿಕೋರನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ. 9 ತಿಂಗಳ ಮಗುವಿಗೂ ದುಷ್ಕರ್ಮಿ ಗಳು ಇರಿದಿದ್ದಾರೆ ಎಂದು ವರದಿಗಳು ಹೇಳಿವೆ.

ಘಟನೆ ಭಯೋತ್ಪಾದಕರ ದಾಳಿ ಎಂಬುದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ . ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯ ಕಾಲಮಾನ ಶನಿವಾರ ಸಂಜೆ ಸಿಡ್ನಿಯ ‘ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್’ ಮಾಲ್‌ನಲ್ಲಿ ಈ ದಾಳಿ ನಡೆದಿದೆ.

error: Content is protected !! Not allowed copy content from janadhvani.com