ಪೆಗಾಸಸ್ ಸೇರಿದಂತೆ ಸ್ಪೈವೇರ್ ದಾಳಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಐಫೋನ್ ಬಳಕೆದಾರರಿಗೆ ಆಪಲ್ ಎಚ್ಚರಿಕೆ ನೀಡಿದೆ. ಭಾರತ ಸೇರಿದಂತೆ 91 ದೇಶಗಳ ಬಳಕೆದಾರರಿಗೆ ಆಪಲ್ ಈ ಎಚ್ಚರಿಕೆ ನೀಡಿದೆ.
ಆಪಲ್ ಅಕ್ಟೋಬರ್ 2023 ರಲ್ಲಿ ಬಳಕೆದಾರರಿಗೆ ಇದೇ ರೀತಿಯ ಎಚ್ಚರಿಕೆ ಯನ್ನು ಐಫೋನ್ ನೀಡಿತ್ತು. ಅಂದು ಕಾಂಗ್ರೆಸ್ ನಾಯಕ ಶಶಿ ತರೂರ್, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯ ಮಹುವಾ ಮೊಯಿತ್ರಾ ಮುಂತಾದವರಿಗೆ ಎಚ್ಚರದಲ್ಲಿರುವಂತೆ ಸೂಚಿಸಲಾಗಿತ್ತು.
ಎನ್.ಎಸ್.ಓ. ಗ್ರೂಪ್ ಎಂಬ ಇಸ್ರೇಲ್ ಕಂಪೆನಿ ಯ ಪೆಗಾಸಸ್ ಬೇಹುಗಾರಿಕ ಸಾಫ್ಟ್ವೇರ್ ಬಳಸಿ ಭಾರತದ ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ 29 ಐಫೋನ್‌ಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ತನಿಖೆ ಮಾಡಲು 2021ರಲ್ಲಿ ಸುಪ್ರೀಂ ಕೋರ್ಟ್ ಸಮಿತಿಯನ್ನು ನೇಮಿಸಿತು. 2022 ರಲ್ಲಿ, ಐದು ಮೊಬೈಲ್ ಫೋನ್‌ಗಳಲ್ಲಿ ಈ ಮಾಲ್‌ವೇರ್ ಕಂಡುಬಂದಿದೆ ಎಂದು ಸಮಿತಿ ಹೇಳಿದೆ.