janadhvani

Kannada Online News Paper

ದಾರುಲ್ ಇರ್ಷಾದ್ ದಮ್ಮಾಮ್ ಘಟಕದ ನೂತನ ಅಧ್ಯಕ್ಷರಾಗಿ ನೌಶಾದ್ ಪೊಲ್ಯ ಆಯ್ಕೆ

ದಮ್ಮಾಮ್: (ಜನಧ್ವನಿ ವಾರ್ತೆ) ದಾರುಲ್ ಇರ್ಷಾದ್ ದಮ್ಮಾಮ್ ಘಟಕದ ವಾರ್ಷಿಕ ಮಹಾ ಸಭೆ ಹಾಗೂ ಇಫ್ತಾರ್ ಮೀಟ್ ಕಾರ್ಯ ಕ್ರಮ ಇತ್ತೀಚೆಗೆ ತಾರೀಕು 01- 06 -2018 ರಂದು ರೋಸ್ ಆಡಿಟೋರಿಯಂ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವು ಅಬೂಬಕ್ಕರ್ ಮಿಸ್ಬಾಹಿ ಉಸ್ತಾದರ ದುಆ ದೊಂದಿಗೆ ಆರಂಭ ಗೊಂಡು ರಶೀದ್ ಸಖಾಫಿ , ಅಬೂಬಕರ್ ಮಿಸ್ಬಾಹಿ , ಅವರ ನೇತೃತ್ವ ದಲ್ಲಿ ಬದ್ರ್ ಮೌಲೀದ್ ಪಾರಾಯಣ ನಡೆಸಲಾಯಿತು ನಂತರ ಅಬೂಬಕ್ಕರ್ ಮಿಸ್ಬಾಹಿ ಉಸ್ತಾದ್ ಖಿರಾಅತ್ ಪಠಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಮ್ಮಾಮ್ ಘಟಕದ ಅಧ್ಯಕ್ಷರಾದ. ಇಕ್ಬಾಲ್ ಅರ್ಕುಳ ಅವರು ವಹಿಸಿದರು
ಶಾಹುಲ್ ಹಮೀದ್ ಉಜಿರೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು ದಮ್ಮಾಮ್ ಘಟಕದ ಪ್ರಧಾನ ಕಾರ್ಯದರ್ಶಿ ನೌಶಾದ್ ಪೊಲ್ಯ ರವರು ಒಂದು ವರ್ಷಗಳಲ್ಲಿ ನಡೆದ ಸಂಕ್ಷಿಪ್ತ ವರದಿಯನ್ನು ಸಭೆಯ ಮುಂದೆ ವಾಚಿಸಿದರು / ಕೋಶಾಧಿಕಾರಿ ರಶೀದ್ ವಿಟ್ಲಾ ಅವರು ಹಿಂದಿನ ಒಂದು ವರುಷದ ಲೆಕ್ಕ ಪತ್ರವನ್ನು ಮಂಡಿಸಿದರು.

ಕಾರ್ಯ ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅನ್ವರ್ ಹುಸೈನ್ ಗೂಡಿನಬಳಿ / ಕೋಶಾದಿ ಕಾರಿ ಅಮ್ಜದ್ ಖಾನ್ /. ದಮ್ಮಾಮ್ ಘಟಕದ ಗೌರವಾಧ್ಯಕ್ಷರಾದ ಅಬೂಬಕ್ಕರ್ ಪಡುಬಿದ್ರೆ / ದಾರುಲ್ ಇರ್ಷಾದ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಕಮರುದ್ದೀನ್ ಗೂಡಿನಬಳಿ / ಆಗಮಿಸಿದರು
ತದ ನಂತರ
ಮುಖ್ಯ ಅತಿಥಿಗಳಿಂದ ಕಾರ್ಯಕ್ರಮಕ್ಕೆ ಶುಭ ಹಾರೆಯಿಸಿದರು

ಕಾರ್ಯಕ್ರಮಕ್ಕೆ. ದಾರುಲ್ ಇರ್ಷಾದ್. ಮರ್ಕಝುಲ್ ಹುದಾ ,ಕೆ ಸಿ ಎಫ್ , ಹಾಗೂ ವಿವಿಧ ಸಂಘಟನೆ ನಾಯಕರುಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಹಿಂದಿನ ಸಮಿತಿಯನ್ನು ವಿಸರ್ಜಿಸಿ 2018 / 2019 ಸಾಲಿನ ಹೊಸ ಸಮಿತಿಯನ್ನು ಆರಿಸಲಾಯಿತು
ನೂತನ ಸಾರಥಿಗಳು
ಗೌರವಾಧ್ಯಕ್ಷರು : ಅತ್ತಾವುಲ್ಲಾಹ್ ಕಡಬ
ಅಧ್ಯಕ್ಷರು : ಆಶ್ರಫ್ ನೌಶಾದ್ ಪೊಲ್ಯ
ಉಪಾಧ್ಯಕ್ಷರು : ಶಂಸುದ್ದೀನ್ ಅರ್ಕುಳ
ಪ್ರಧಾನ ಕಾರ್ಯದರ್ಶಿ : ಹಮೀದ್ ಕಬಕ
ಕಾರ್ಯದರ್ಶಿ : ಹೈದರ್ ಕಾರ್ಕಳ
ಕೋಶಾಧಿಕಾರಿ : ಅಶ್ರಫ್ ಬೆಳ್ಳೂರ್
ಇವರನ್ನು ನೂತನ ಪದಾಧಿಕಾರಿಗಳನ್ನಾಗಿ
ಆಯ್ಕೆ ಮಾಡಲಾಯಿತು
ಹಾಗು ಕೆಲವು ಹೊಸ ನೂತನ ಸದಸ್ಯರನ್ನು. ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು.

ತದ ನಂತರ ನೂತನ ವಾಗಿ ಆಯ್ಕೆಯಾದ ಅಧ್ಯಕ್ಷರು ನೌಶಾದ್ ಪೊಲ್ಯ ಮಾತನಾಡಿ ನೂತನ ಸಾಲಿನ ಹೊಸ ಯೋಜನೆಗಳನ್ನು ಸಭೆಯ ಮುಂದೆ ಪ್ರಸ್ತಾವನೆ ಮಾಡಿದರು ಇದೆಲ್ಲವನ್ನು ಸಾಕಾರ ಗೊಳಿಸಬೇಕಾದರೆ ಪ್ರತಿಯೊಬ್ಬರು ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ವಿನಂತಿ ಮಾಡಿದರು

ಶಾಹುಲ್ ಹಮೀದ್ ಉಜಿರೆ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು
ಕಾರ್ಯ ಕ್ರಮದ ಕೊನೆಯಲ್ಲಿ ಉಬೈದುಲ್ಲಾಹ್ ಉಜಿರೆ ಧನ್ಯವಾದ ಗೆಯ್ದರು

error: Content is protected !! Not allowed copy content from janadhvani.com