janadhvani

Kannada Online News Paper

ಕೆ. ಸಿ . ಎಫ್ ಸೌದಿ ಅರೇಬಿಯಾಕ್ಕೆ ಉತ್ಸಾಹಿ ಯುವ ಕಾರ್ಯಕರ್ತ ನಷ್ಟ

ಜುಬೈಲ್: ( ಜನಧ್ವನಿ ವಾರ್ತೆ ) ಸೌದಿ ಅರೇಬಿಯಾದ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಖಮರುದ್ದೀನ್ ಗೂಡಿನ ಬಳಿ , ಆಸಿಫ್ ಗೂಡಿನಬಳಿ ಹಾಗೂ ಸಮೀಉಲ್ಲಾ ಇವರ ಸಹೋದರಿ ಪುತ್ರ ಕೆ.ಸಿ ಎಫ್ ಜುಬೈಲ್ ಸೆಕ್ಟರ್ ನ ಸಕ್ರಿಯ ಕಾರ್ಯಕರ್ತ ಅನ್ಝರ್ ಗೂಡಿನ ಬಳಿ(೨೮) ಅವರ ಅಪಘಾತ ಮರಣ ಅತ್ಯಂತ ಅಘಾತಕಾರಿ ಮತ್ತು ಸಂಘಟನೆಯು ಓರ್ವ ಉತ್ಸಾಹಿ ಯುವಕನನ್ನು ಕಳೆದುಕೊಂಡಿದೆ ಎಂದು ಕೆ,ಸಿ. ಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಫಿ ಯೂಸುಫ್ ಸಖಾಫಿ ಬೈತಾರ್ , ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಅಬೂಬಕ್ಕರ್ ರೈಸ್ ಕೊ, ಹಾಜಿ ಎನ್ ಎಸ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಅವರ ಮರಣ್ದ ಬಗ್ಗೆ ಸೌದಿ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿ ತೀವೃ ಸಂತಾಪಪಡಿಸುತ್ತದೆ. ಅವರ ಪರಲೋಕ ಜೀವನದಲ್ಲಿ ಸಂತೋಷ ಮತ್ತು ಮೋಕ್ಷ ಕೊಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಲು ಶಕ್ತಿ ಕೊಡಲಿ ಹಾಗೂ ಮೃತರ ಹೆಸರಲ್ಲಿ ಸುನ್ನೀ ಪ್ರಸ್ಥಾನದ ಎಲ್ಲರೂ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com