janadhvani

Kannada Online News Paper

ಕರ್ನಾಟಕದ ಉಮ್ರಾ ಯಾತ್ರಿಕರು ಮದೀನಾದಲ್ಲಿ ಮೃತ್ಯು- ದಫನ ಕಾರ್ಯಕ್ಕೆ ಕೆಸಿಎಫ್ ಸಹಕಾರ

ಮುಂಡಗೋಡ ಪಟ್ಟಣದ ರೋಣ ಮೆಡಿಕಲ್‌ನ ಮಾಲಕ ಫಯಾಝ್ ರೋಣ, ಪತ್ನಿ ಅಫ್ರೀನಾ ಬಾನು ಹಾಗೂ ಸಹೋದರನ ಮಗ ಆಯಾನ್ ಕಾರ್ಕಳ ಮೃತಪಟ್ಟವರು.

ಮದೀನಾ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಕುಟುಂಬವೊಂದು ಪ್ರಯಾಣಿಸುತ್ತಿದ ವಾಹನವು ಮದೀನಾ ಮುನವ್ವರದಲ್ಲಿ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದು ಅವರ ದಫನ ಕಾರ್ಯವು ನಿನ್ನೆ ಮದೀನಾದಲ್ಲಿ ನಡೆಯಿತು.

ಮುಂಡಗೋಡ ಪಟ್ಟಣದ ರೋಣ ಮೆಡಿಕಲ್‌ನ ಮಾಲಕ ಫಯಾಝ್ ರೋಣ, ಪತ್ನಿ ಅಫ್ರೀನಾ ಬಾನು ಹಾಗೂ ಸಹೋದರನ ಮಗ ಆಯಾನ್ ಕಾರ್ಕಳ ಮೃತಪಟ್ಟವರು.

ಟೈರ್ ಸ್ಪೋಟಗೊಂಡ ಕಾರಣ ಕಾರು ಪಲ್ಟಿಯಾಗಿದ್ದು, ಮೂವರು ಸ್ಥಳದಲ್ಲೇ ಮೃತರಾದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ಇಲಾಖೆಯ ನೆರವಿನೊಂದಿಗೆ ಮೃತರ ದಫನ ಕಾರ್ಯವು ನಿನ್ನೆ ಳುಹರ್ ಮತ್ತು ಅಸರ್ ನಮಾಜ್ ಬಳಿಕ ಜನ್ನತುಲ್ ಬಖೀಆದಲ್ಲಿ ನಡೆಯಿತು.

error: Content is protected !! Not allowed copy content from janadhvani.com