janadhvani

Kannada Online News Paper

KCF ಡಿಸೇನಿಯಂ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ: ಈದ್ ದಿನದಲ್ಲಿ ಪೋಸ್ಟರ್ ಪ್ರದರ್ಶನ

KCF ಡಿಸೇನಿಯಂ ಅಂತರಾಷ್ಟೀಯ ಸಮ್ಮೇಳನ ಮೇ 19ರಂದು ಮಂಗಳೂರು ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದೆ.

ಉಳ್ಳಾಲ: KCF ಡಿಸೇನಿಯಂ ಅಂತರಾಷ್ಟೀಯ ಮಹಾ ಸಮ್ಮೇಳನವು ಮೇ 19ರಂದು ಮಂಗಳೂರು ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸಮಾರಂಭದ ಪೋಸ್ಟರನ್ನು ರಾಜ್ಯಾದ್ಯಂತ ಈದ್ ದಿನದಲ್ಲಿ ಪ್ರದರ್ಶಿಸಲಾಯಿತು.

ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸನ್ನಿಧಿಯಲ್ಲಿ ಕಾರ್ಯಕ್ರಮದ ಪೋಸ್ಟರನ್ನು ಉಳ್ಳಾಲ ಸಯ್ಯಿದ್ ಮದನಿ ಜುಮಾ ಮಸೀದಿಯ ಖತೀಬರಾದ ಬಹು| ಇಬ್ರಾಹಿಂ ಸಅದಿ ಉಸ್ತಾದ್ ಪ್ರದರ್ಶಿಸಿದರು. ದರ್ಗಾ ಅಧ್ಯಕ್ಷರಾದ ಬಿ.ಜೆ ಹನೀಫ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್ ರೈಟ್ವೇ ಹಳೇಕೋಟೆ, ಲೆಕ್ಕ ಪರಿಶೋಧಕರಾದ ಫಾರೂಕ್ ಕಲ್ಲಾಫು, ಕೋಶಧಿಕಾರಿಯಾದ ನಾಝಿಮ್ ಮುಕ್ಕಚೇರಿ ಹಾಗೂ ಅಲ್ ಕರೀಮ್ ಹಳೇಕೋಟೆ ಜುಮಾ ಮಸೀದಿಯ ಖತೀಬರಾದ ಹಾಫಿಲ್ ಸಿರಾಜುದ್ದೀನ್ ಹಿಮಮಿ ಸಖಾಫಿ ಕರಾಯ ಉಸ್ತಾದ್, ಮುಹಝಿನ್ ರಾದ ಆದಮ್ ಉಸ್ತಾದ್ ಹಾಗೂ KCF ಗ್ಲೋಬಲ್ ಯುನಿಟ್ ದುಬೈ ಇದರ ಅಧ್ಯಕ್ಷರಾದ ಹಾಜಿ ಶುಕೂರ್ ಉಳ್ಳಾಲ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com