janadhvani

Kannada Online News Paper

‘ಈದ್’ ಪರಸ್ಪರ ಪ್ರೀತಿ ಮತ್ತು ಸಹೋದರತೆಯ ಸುದಿನ- ಸಯ್ಯಿದ್ ಶಮೀಮ್ ತಂಙಳ್ ಅಲ್ ಬುಖಾರಿ

ಇಂದು ದಾರುನ್ನಜಾತ್ ಟಿಪ್ಪುನಗರ ಇದರ ಅಧೀನದಲ್ಲಿರುವ ಇಮಾಂ ಶಾಫಿಈ ಜುಮಾ ಮಸ್ಜಿದ್ ನಲ್ಲಿ ಈದುಲ್ ಫಿತ್ರ್ ಬಹಳ ಅದ್ದೂರಿಯಾಗಿ ನಡೆಸಲಾಯಿತು. ಈದ್ ನಮಾಜ್ ಮತ್ತು ಖುತುಬಾ ಬಳಿಕ ಶಮೀಮ್ ತಂಙಳ್ ಈದ್ ಸಂದೇಶವನ್ನು ಸಾರಿದರು.

ಈ ದಿನ ಬಹಳ ಪಾವಿತ್ರ್ಯತೆಯ ದಿನವಾಗಿದ್ದು 29 ದಿವಸ ಉಪವಾಸ ಹಿಡಿದು ಪುಣ್ಯಕರ್ಮಗಳ ಮೂಲಕ ಪವಿತ್ರತೆಗಳನ್ನು ಮೈಗೂಡಿಸಿ ಪೆರ್ನಾಲ್ ಆಚರಿಸುವುದರ ಜೊತೆಗೆ ಪ್ರವಾದಿ (ಸ ಅ)ರು ಮುಸ್ಲಿಮರಿಗೆ ತೋರಿಸಿಕೊಟ್ಟ ಆದರ್ಶವನ್ನು ಮೈಗೂಡಿಸಿಕೊಂಡು ಪ್ರೀತಿ ಸಹೋದರತೆಯನ್ನು ಹಂಚಿಕೊಂಡು ಕುಟುಂಬಗಳೊಂದಿಗೆ ಬಾಂಧವ್ಯಗಳು ಹೆಚ್ಚಿಸುವ ಮೂಲಕ ಅನಾಚಾರಗಳಿಗೆ ಕಡಿವಾಣ ಹಾಕುತ್ತಾ ನಾವೆಲ್ಲ ಸಮಾಜಕ್ಕೆ ಉತ್ತಮ ಸಂದೇಶ ನೀಡುವವರಾಗಬೇಕು ಎಂದು ಹೇಳಿದರು.

ಕೊನೆಯಲ್ಲಿ ಊರಿನಲ್ಲಿರುವ ಮತ್ತು ವಿದೇಶದಲ್ಲಿರುವ ಎಲ್ಲಾ ವಿಶ್ವಾಸಿಗಳಿಗೆ ನಮ್ಮ ಸಂಸ್ಥೆಯ ಎಲ್ಲಾ ಸಹಕಾರಿಗಳಿಗೆ ಪ್ರಾರ್ಥನೆ ನಡೆಸಿದರು ಎಂದು ಸಂಸ್ಥೆಯ
ಜನರಲ್ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.