janadhvani

Kannada Online News Paper

ಈದ್ ರಜೆ: ದ.ಕ.ಜಿಲ್ಲಾ ವಕ್ಫ್ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಅಭಿನಂದನೆಗಳು

ಮಂಗಳೂರು :ಮುಸಲ್ಮಾನರ ಪವಿತ್ರ ರಂಝಾನ್ ಹಬ್ಬವು ಏಪ್ರಿಲ್ 10 ಕ್ಕೆಂದು ಚಂದ್ರ ದರ್ಶನದ ಆಧಾರದಲ್ಲಿ ಖಾಝಿಗಳು ಘೋಷಣೆ ಮಾಡಿದ್ದಾರೆ. ಆದರೆ, ಸರ್ಕಾರಿ ರಜೆಯು ಏಪ್ರಿಲ್ 11 ಕ್ಕೆ ನಿಗದಿಯಾಗಿತ್ತು.

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ರವರ ಮನವಿ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದು, ಮಾನ್ಯ ಸರಕಾರ,ಸ್ಪೀಕರ್ ಎಲ್ಲರ ಸಂದರ್ಭಯೋಜಿತ ಸ್ಪಂದನೆಯಿಂದ ಕೆಲವು‌ ನಿಬಂಧನೆಗಳೊಂದಿಗೆ ಸರಕಾರಿ ರಜೆಯನ್ನು ಏಪ್ರಿಲ್ 10 ಕ್ಕೆಂದು ಆದೇಶ ಹೊರಡಿಸಿದೆ.

ಈ ಒಂದು ಸ್ಪಂದನೆಗೆ ಜಿಲ್ಲಾಡಳಿತಕ್ಕೆ ಮತ್ತು ಸರಕಾರಕ್ಲೆ ಸಮುದಾಯದ ಪರವಾಗಿ ಅಭಿನಂದಿಸುತ್ತೇವೆ ಎಂದು ಜಿಲ್ಲಾ ವಕ್ಪ್ ಉಪಾಧ್ಯಕ್ಷ ಅಶ್ರಫ್ ಕಿನಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com