janadhvani

Kannada Online News Paper

ಡಿಕೆಯಸ್ಸಿ ವಿಷನ್ 30 ರ ಕನಸನ್ನು ನನಸಾಗಿಸಲು ಅವಿರತ ಶ್ರಮ- ಬೃಹತ್ ಇಫ್ತಾರ್ ಸಮಾವೇಶದಲ್ಲಿ ಅಶ್ರಫ್ ಎಕ್ಸಪರ್ಟೈಸ್

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ) ಮಂಗಳೂರು 30 ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಡಿಕೆಯಸ್ಸಿ ವಿಷನ್ 30 ಗೆ ಚಾಲನೆ ನೀಡಲಾಗಿದೆ.
1995 ರ ಅಕ್ಟೋಬರ್ 15 ರಂದು ಸ್ಥಾಪನೆಗೊಂಡ ಡಿಕೆಯಸ್ಸಿಗೆ 30 ರ ಹರೆಯ. ಧಾರ್ಮಿಕ- ಲೌಕಿಕ ವಿದ್ಯಾಭ್ಯಾಸ ವನ್ನು ನೀಡಿ ಹಲವಾರು ವಿದ್ವಾಂಸರನ್ನು, ಪದವೀಧರರನ್ನು ಸಮಾಜಕ್ಕೆ ಅರ್ಪಿಸಿದೆ.ಡಿಕೆಯಸ್ಸಿಯ ಮುಂದಿನ ಗುರಿಯಾಗಿರುವ ಡಿಕೆಯಸ್ಸಿ ವಿಷನ್ 30 ರ ಮುಖ್ಯ ಉದ್ದೇಶವಾಗಿರುವ 30 ಎಕ್ರೆ ಸ್ಥಳ ಖರೀದಿಸಿ ಆ ಸ್ಥಳದಲ್ಲಿ ಡಿಕೆಯಸ್ಸಿ ಯೂನಿವರ್ಸಿಟಿ ಸ್ಥಾಪಿಸುವ ಮುಖ್ಯ ಉದ್ದೇಶಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಸಮಾಜಕ್ಕೆ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ ಹಾಗೂ ಸಮಾಜದ ಜನರ ವಿದ್ಯಾಭ್ಯಾಸದ ಉನ್ನತಿಗೆ ಶ್ರಮಿಸೋಣ ಎಂದು ಜುಬೈಲ್ ಎಕ್ಸಪರ್ಟೈಸ್ ಸಮೂಹ ಸಂಸ್ಥೆಗಳ ಪಾಲುದಾರ ಜನಾಬ್ ಅಶ್ರಫ್ ಕರ್ನಿರೆ ಮಾತನಾಡಿದರು.ಅವರು ಡಿಕೆಯಸ್ಸಿ ಜುಬೈಲ್ ಮತ್ತು ಯೂತ್ ವಿಂಗ್ ಘಟಕಗಳು ಆಯೋಜಿಸಿದ್ದ ಬೃಹತ್ ಇಫ್ತಾರ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಝಕರಿಯಾ ಹಾಜಿ ಅಲ್ ಮುಝೈನ್, ಜನಾಬ್ ನಝೀರ್ ಪಡುಬಿದ್ರಿ ಅಲ್ ಫಲಾಹ್, ಜನಾಬ್ ಅಸ್ಕಾಫ್, ಮರ್ಕಝ್ ಮೂಳೂರು ಉಪಾಧ್ಯಕ್ಷ ಹಾಜಿ ಇಸ್ಮಾಯೀಲ್ ಕಿನ್ಯ, ವಿಶ್ವ ಕನ್ನಡಿಗ ಕರ್ನಾಟಕ ಸೌದಿ ಅರೇಬಿಯ ಇದರ ಅಧ್ಯಕ್ಷ ಶ್ರೀ ಸತೀಶ್ ಬಜಾಲ್, ಡಿಕೆಯಸ್ಸಿ ವಿಷನ್ 30 ಹಮ್ಮಿಕೊಂಡಿರುವ ಈ ಬೃಹತ್ ಯೋಜನೆಗೆ ನಾವೆಲ್ಲರೂ ಡಿಕೆಯಸ್ಸಿಯೊಂದಿಗಿದ್ದೇವೆ.ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಹಾಗೂ ಡಿಕೆಯಸ್ಸಿಯ ಕನಸನ್ನು ನನಸಾಗಿಸಬೇಕಾಗಿದೆ. ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರು.
ಡಿಕೆಯಸ್ಸಿ ವಿಷನ್ 30 ಚೆಯರ್ಮ್ಯಾನ್ ಹಾಜಿ ಹಾತಿಂ ಕೂಳೂರು, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು,ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಜುಬೈಲ್ ಘಟಕ ಅಧ್ಯಕ್ಷ ಅಶ್ರಫ್ ನಾಳ, ಯೂತ್ ವಿಂಗ್ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್, ಕೇಂದ್ರ ಸಮಿತಿ ಸಂವಹಣಾ ಕಾರ್ಯದರ್ಶಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ, ಕಾರ್ಯದರ್ಶಿಗಳಾದ ಅಬೂಬಕ್ಕರ್ ಬರ್ವ,ಅಬ್ದುಲ್ ಗಫೂರ್ ಸಜಿಪ, ತುಖ್ಬಾ ಘಟಕದ ನೇತಾರ ಅಬ್ದುಲ್ ಅಝೀಝ್ ಮೂಳೂರು, ಫಾರೂಖ್ ಕನ್ಯಾನ, ಅಬ್ದುಲ್ ಅಝೀಝ್ ಪವಿತ್ರ ಹಾಗೂ ಅಲ್ ಹಸ್ಸ, ಜುಬೈಲ್, ದಮ್ಮಾಂ, ಖೋಬರ್, ತುಖ್ಬಾ ಘಟಕದ ಹಿತೈಷಿಗಳು, ಬೃಹತ್ ಸಮಾವೇಶ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಯು.ಡಿ.ಅಬ್ದುಲ್ ಹಮೀದ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com