janadhvani

Kannada Online News Paper

ಕೆ.ಸಿ.ಎಫ್. ಖತ್ತರ್ – ಗ್ರಾಂಡ್ ಇಫ್ತಾರ್

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಕಾರ್ಯಕ್ರಮವು ದಿನಾಂಕ 15-03-2024 ರಂದು ದೋಹಾ ಮೋಡರ್ನ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು

ಇಫ್ತಾರ್ ಸ್ವಾಗತ ಸಮಿತಿ ಚೇರ್ಮಾನ್ ಕಬೀರ್ ಮಡಿಕೇರಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ, ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತ ಕೋರಿದರು.

ಇಫ್ತಾರ್ ಕೂಟದ ಸಲುವಾಗಿ ಅಸರ್ ನಮಾಝಿನ ನಂತರ ಮಹಿಳೆಯರಿಗಾಗಿ ಪ್ರತ್ಯೇಕ ತರಗತಿಯೊಂದನ್ನು, ಖತ್ತರ್ ಪ್ರವಾಸದಲ್ಲಿರುವ ಅಲ್’ಅನ್ಸಾರ್ ಪತ್ರಿಕೆಯ ವ್ಯವಸ್ಥಾಪಕರಾದ
ಜಿ.ಎಂ. ಕಾಮಿಲ್ ಸಖಾಫಿಯವರು ನಡೆಸಿಕೊಟ್ಟರು.

ವೇದಿಕೆಯಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು, ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು, ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಅಧ್ಯಕ್ಷರಾದ ಹಾಜಿ ಕಬೀರ್ ದೇರಳಕಟ್ಟೆ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಯೂಸುಫ್ ಸಖಾಫಿ ಅಯ್ಯಂಗೇರಿ, ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಖಾಲಿದ್ ಹಿಮಮಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಖತ್ತರ್ ಸಮಿತಿ ಅಧ್ಯಕ್ಷರಾದ ಅಬ್ದುಲ್ಲಾ ಉಙ್ಞಿ ಉಚ್ಚಿಲ ರವರು ಉಪಸ್ಥಿತರಿದ್ದರು.

ದುಆ ಹಾಗೂ ಸ್ವಲಾತ್ ಮಜ್ಲಿಸ್ ನೊಂದಿಗೆ ಆರಂಭವಾದ ಇಫ್ತಾರ್ ಸಂಗಮದಲ್ಲಿ ಸಹಸ್ರಾರು ಸಂಖೈಯ ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು. ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ನಾಯಕರಾದ ಸಿದ್ದೀಖ್ ಕೃಷ್ಣಾಪುರ, ಸಿದ್ದೀಖ್ ಹಂಡುಗೂಳಿಯವರ ನಾಯಕತ್ವದ ಐ-ಟೀಮ್ ಸ್ವಯಂಸೇವಕ ತಂಡ ಹಾಗೂ ಹಸನ್ ಪೂಂಜಾಲಕಟ್ಟೆ, ಅಶ್ರಫ್ ಕಾವಳ್’ಕಟ್ಟೆ ರವರ ನೇತೃತ್ವದ ಪುಡ್ ಟೀಮ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಇಫ್ತಾರ್ ಸ್ವಾಗತ ಸಮಿತಿ ಕನ್ವೀನರ್ ಸಾದಿಕ್ ಮೂಳೂರು ಧನ್ಯವಾದಗೈದರು.

error: Content is protected !! Not allowed copy content from janadhvani.com