janadhvani

Kannada Online News Paper

ಲೋಕಸಭಾ ಚುನಾವಣೆ ಹಿನ್ನೆಲೆ ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕ ಮುಂದಕ್ಕೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸಮನ್ವಯ ಕ್ಷೇತ್ರ ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕವನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದ್ದು, ಏಪ್ರಿಲ್ 19 ರಿಂದ 28 ರ ವರೆಗೆ ನಡೆಯಬೇಕಿದ್ದ ಉರೂಸ್ ಕಾರ್ಯಕ್ರಮವನ್ನು ಮೇ 03 ರಿಂದ 12 ರ ತನಕ ನಡೆಸಲು ತೀರ್ಮಾನಿಸಲಾಗಿದೆ.

ಲೋಕಸಭಾ ಚುನಾವಣೆ ಎಪ್ರಿಲ್ 26 ರಂದು ನಿಗದಿಯಾಗಿರುವುದನ್ನು ಮನಗಂಡು ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್ ನಿರ್ದೇಶನದ ಮೇರೆಗೆ ಉರೂಸ್ ಸಮಿತಿ ತುರ್ತು ಸಭೆ ನಡೆಸಿ ದಿನಾಂಕ ಬದಲಾವಣೆ ಮಾಡಿದ್ದು, ದ‌.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಉರೂಸ್ ಸಮಿತಿ ಪದಾಧಿಕಾರಿಗಳು ಈ ಮಹತ್ವದ ನಿರ್ಧಾರ ಪ್ರಕಟಿಸಿದರು.

error: Content is protected !! Not allowed copy content from janadhvani.com