janadhvani

Kannada Online News Paper

ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್ ವತಿಯಿಂದ 10 ನೇ ವರ್ಷದ ರಮಳಾನ್ ಕಿಟ್ ವಿತರಣೆ

ಸುಳ್ಯ:- ಕೊಡಿಯಾಲ ಗ್ರಾಮದ ಮಾಲೆಂಗ್ರಿ ಯುವಕರ ವಾಟ್ಸಪ್ ಗ್ರೂಪ್ ವತಿಯಿಂದ 10 ನೇ ವರ್ಷದ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮವು ಮಾ.12 (ಮಂಗಳವಾರ) ನಡೆಯಿತು. ಮಾಲೆಂಗ್ರಿ ಮಸೀದಿಯ ಖತೀಬರಾದ ಅಬ್ಬುರ್ರಹಮಾನ್ ಅಹ್ಸನಿ ಉಸ್ತಾದರು ದುವಾದೂಂದಿಗೆ ವಿತರಣೆಯನ್ನು ಉದ್ಘಾಟಿಸಿದರು.

ಹಲವಾರು ವರ್ಷಗಳಿಂದ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಯುವಕರ ಸಂಘವು, ಈ ವರ್ಷವೂ ಕೂಡ ಬಡತನ ರೇಕೆಗಿಂತ ಕೆಳಗಿನ ಸುಮಾರು 35 ಬಡ ಕುಟುಂಬಗಳಿಗೆ ರಮಲಾನ್ ಕಿಟ್ ನೀಡಿ ಗಮನಸೆಳೆಯಿತು.

ಶಾಫಿ ಬಿ.ಯಂ ರ ಸಾರಥ್ಯದಲ್ಲಿ ರಚನೆಗೂಂಡ ‘ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್’ ಪ್ರತೀ ವರ್ಷವು ಹಲವಾರು ಜನಸ್ನೇಹಿ ಕಾರ್ಯಕ್ರಮಗಲ್ಲಿ ಮಾಲೆಂಗ್ರಿ ಯುವಕರ ಸಹಾಯದಿಂದ ಭಾಗವಹಿಸುತ್ತಾ ಬಂದಿದೆ.

ವರದಿ:ಮನ್ಸೂರ್ ಬೆಳ್ಳಾರೆ

error: Content is protected !! Not allowed copy content from janadhvani.com