janadhvani

Kannada Online News Paper

ಅರಂತೋಡು ಎಸ್ಕೆ ಎಸ್ಸೆಸ್ಸೆಫ್: ಮಜ್ಲಿಸುನ್ನೂರ್, ಇಫ್ತಾರ್ ಕೂಟ ಮತ್ತು ತಹ್ಲೀಲ್ ಸಮರ್ಪಣೆ

ಅರಂತೋಡು: ಎಸ್ಕೆ ಎಸ್ಸೆಸ್ಸೆಫ್ ಅರಂತೋಡು ಶಾಖೆ ವತಿಯಿಂದ ಮಜ್ಲಿಸ್ ನ್ನೂರ್ ಹಾಗೂ ಇಫ್ತಾರ್ ಕೂಟ ಮತ್ತು ಅಗಲಿದ ಸಮಸ್ತ ನಾಯಕರು ಸಹಿತವಿರುವವರಿಗೆ ತಹ್ಲೀಲ್ ಸಮರ್ಪಣೆ ಮಾ.21 ರಂದು ಅಸರ್ ನಮಾಜಿನ ಬಳಿಕ ಅರಂತೋಡು ಮಸೀದಿ ವಠಾರದಲ್ಲಿ ನಡೆಯಿತು.

ಮಜ್ಲಿಸ್ ನೇತೃತ್ವ ವನ್ನು ಅರಂತೋಡು ಮಸೀದಿ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ನಿರ್ವಹಿಸಿದರು.ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಜುಬೇರ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್, ಜಮಾತ್ ಕಾರ್ಯದರ್ಶಿ ಕೆ.ಎಂ. ಮೂಸಾನ್ ,ಸಹಾಯಕ ಅದ್ಯಾಪಕ ಶಾಫಿ ಮುಸ್ಲಿಯಾರ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಮಜೀದ್,ಹಮೀದ್ ಹಾಜಿ ಸುಳ್ಯ, ಹಾಜಿ ಅಹ್ಮದ್ ಸುಪ್ರೀಂ,ಹಾಜಿ ಅಹ್ಮದ್ ಪಾರೆ,ಸುಳ್ಯ ಜಮಿಯತುಲ್ ಫಲಾಹ್ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ,ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ,ಖಾದರ್ ಮೊಟ್ಟಂಗಾರ್,ಆಶಿಕ್ ಸುಳ್ಯ,ಹನೀಫ್ ಎ., ಸೇರಿದಂತೆ ಧಾರ್ಮಿಕ ಸಾಮಾಜಿಕ ನೇತಾರರು ಭಾಗವಹಿಸಿದ್ದರು.

ಶರ್ಫುದ್ದೀನ್,ಮುನೀರ್,ಆಶಿಕ್, ಮಾಹಿನ್,ಕಬೀರ್,ರಹೀಂ,ಮುಜೀಬ್, ಮಿಸ್ಬಾ,ಶಹಬಾಝ್,ಸಿನಾನ್,ಸಹಕರಿಸಿದರು. ಜಮಾಅತ್ ಸದಸ್ಯರು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನಿರ್ದೇಶಕರು, ಎಸ್ ಕೆಎಸ್ಎಸ್ ಎಫ್ ಸದಸ್ಯರು ಪಾಲ್ಗೊಂಡರು.

error: Content is protected !! Not allowed copy content from janadhvani.com