janadhvani

Kannada Online News Paper

ಜಿಲ್ಲಾ ಮಟ್ಟದ ಗ್ರಾಂಡ್ ಕನ್ವೆನ್ಸನ್ ಮೂಲಕ ರೂಹಾನಿ ಇಜ್ತಿಮಾ ಸಿದ್ದತೆಗಳಿಗೆ ಚಾಲನೆ

ಬೆಂಗಳೂರು. ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿಯ ಸಾರಥ್ಯದಲ್ಲಿ ರಂಜಾನ್ 21 ರ ರಾತ್ರಿ ನಡೆಯುವ ಬೃಹತ್ ರೂಹಾನಿ ಇಜ್ತಿಮಾ ಆಧ್ಯಾತ್ಮಿಕ ಮಜ್ಲಿಸ್ ನ ಯಶಸ್ವಿ ಗೆ ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ.

ಖುದ್ದುಸಾಹೆಬ್ ಈದ್ಗಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಬೆಂಗಳೂರಿನ ಅತಿದೊಡ್ಡ ಇಫ್ತಾರ್ ಮೀಟ್, ಫ್ಯಾಮಿಲಿ ಮೀಟ್, ಬೃಹತ್ ಆಧ್ಯಾತ್ಮಿಕ ಸಂಗಮ,ಧಾರ್ಮಿಕ ಭಾಷಣ,ಸಾಮೂಹಿಕ ದ್ಸಿಕ್ರ್ ದುಆ ಮಜ್ಲಿಸ್ ಮೊದಲಾದ ಕಾರ್ಯಕ್ರಮಗಳು ರೂಹಾನಿ ಇಜ್ತಿಮಾದ ದಿನ ನಡೆಯಲಿದ್ದು ಇದರ ಪ್ರಚಾರಾರ್ಥವಾಗಿ ಎಲ್ಲಾ ಮಸೀದಿ ಮುಂಭಾಗದಲ್ಲಿ ಮೊಹಬ್ಬತ್ ಕೀ ಸರ್ಬತ್, ಕ್ಯಾಂಪಸ್ ಇಫ್ತಾರ್,ಪ್ರೊಪೆಸನಲ್ಸ್ ಗಳಿಗೆ ಐ.ಪಿ.ಎಫ್ ಆಧ್ಯಾತ್ಮಿಕ ಸಂಗಮ,ಫ್ಯಾಮಿಲಿ ಕ್ವಿಝ್,ಸ‌ಅರಿ ವಿತರಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿಕ್ಕಿದೆ.

ಜಾಫರ್ ನೂರಾನಿ ಅವರ ಅಧ್ಯಕ್ಷತೆಯಲ್ಲಿ ಹಲಸೂರು ಮರ್ಕಿನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ರಾಂಡ್ ಕನ್ವೆನ್ಷನ್ ಕಾರ್ಯಕ್ರಮವನ್ನು ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಅದಿ ಪೀಣ್ಯ ಉದ್ಘಾಟಿಸಿದರು.

ಸಯ್ಯದ್ ಶೌಕತ್ ಅಲಿ ತಂಗಲ್ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಿದರು. ಪ್ರಚಾರ ಸಮಿತಿ ಚೇರ್ಮಾನ್ ಮುಜೀಬ್ ಸಖಾಫಿ ಸ್ವಾಗತಿಸಿ, ಸಂಚಾಲಕ ಅಬ್ದುರ್ರಹಿಮಾನ್ ಹಾಜಿ ವಿಷಯ ಮಂಡಿಸಿದರು. ಇಬ್ರಾಹಿಂ ಸಖಾಫಿ ಪಯೋಟ ಸಂಪನ್ಮೂಲ ಸಂಗ್ರಹಣೆಗೆ ನೇತೃತ್ವ ನೀಡಿದರು. ಹುಸೈನ್ ಸಖಾಫಿ ಆಶೀರ್ವಚನ ನೀಡಿದರು. ಎಸ್ ಜೆಎಂ ಜಿಲ್ಲಾಧ್ಯಕ್ಷ ಅಬ್ಬಾಸ್ ನಿಝಾಮಿ ಧನ್ಯವಾದವಿತ್ತರು.

error: Content is protected !! Not allowed copy content from janadhvani.com