ದೋಹಾ : ಕೆಸಿಎಫ್ ದೋಹಾ ಝೋನ್ ಅಧೀನದ ಅಲ್’ಸದ್ದ್ ಹಾಗೂ ಹಿಲಾಲ್ ಸೆಕ್ಟರ್ ಜಂಟಿ ಆಶ್ರಯದಲ್ಲಿ, ಸಮ್ಮೇಳನ ಕಾರ್ಯಕ್ರಮವು ದಿನಾಂಕ 01-03-2024 ಶುಕ್ರವಾರದಂದು ದೋಹಾದ ಐಸಿಬಿಎಫ್ ಸಭಾಂಗಣದಲ್ಲಿ ನಡೆಯಿತು.

ಹಿಲಾಲ್ ಸೆಕ್ಟರ್ ಸಮ್ಮೇಳನ ಸ್ವಾಗತ ಸಮಿತಿ ಚೇರ್ಮಾನ್ ಶಾಫಿ ಅನ್ವರಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವು, ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರುರವರಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೆಕ್ಟರ್ ಸಮ್ಮೇಳನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ,ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ನಾಯಕರಾದ ಝಕರಿಯ್ಯಾ ಸಮ್ಜಾದ್, ಸಂಘಟನೆಯ ಮಹತ್ವ, ಯಾತಕ್ಕಾಗಿ ಸಂಘಟನೆಯಲ್ಲಿ ಕಾರ್ಯಾಚರಿಸಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟನೆ ಯಾವ ರೀತಿ ಪರಿಹಾರವಾಗಲಿದೆ ಎಂಬೂದರ ಕುರಿತಾಗಿ ಸಭಿಕರನ್ನು ಉದ್ದೇಶಿಸಿ ಸವಿಸ್ತಾರವಾಗಿ ವಿವರಿಸಿದರು. ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಹಾಗೂ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಕೊಡಗು ರವರು ಕಾರ್ಯಕ್ರಮಕ್ಕೆ ಶುಭಹಾರೈಸುತ್ತಾ ಪ್ರಾಸ್ತಾವಿಕ ಭಾಷಣಗೈದರು.
ಕಾರ್ಯಕ್ರಮದ ಭಾಗವಾಗಿ,ಕೆಸಿಎಫ್ ದೋಹಾ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಆಸಿಫ್ ಅಹ್ಸನಿ ಅನ್ವಾರಿ ಮತ್ತು ತಂಡದಿಂದ ಸುಮಧುರವಾದ ಸಂಘಟನೆಯ ಹಾಡು ಮೂಡಿಬರುವುದರ ಜೊತೆಯಲ್ಲಿ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಕಾರ್ಯದರ್ಶಿ ಹಾಗೂ ದೋಹಾ ಝೋನ್ ಮುರಾಖಿಬ್ ಸಿದ್ದೀಖ್ ಕೃಷ್ಣಾಪುರ ರವರಿಂದ ಸಂಘಟನೆಯ ಪರಿಚಯದ ಮಾತು ಮೊಳಗಿಬಂತು.
ವೇದಿಕೆಯಲ್ಲಿ ಅಲ್’ಸದ್ದ್ ಸೆಕ್ಟರ್ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಹಮೀದ್ ಸುರಲ್ಪಾಡಿ, ದೋಹಾ ಝೋನ್ ಅಧ್ಯಕ್ಷರಾದ ನಿಯಾಝ್ ಕುರ್ನಾಡ್, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಅಡ್ಮಿನ್ ವಿಭಾಗದ ಚೆರ್ಮಾನ್ ಹಾಜಿ ಕಬೀರ್ ದೇರಳಕಟ್ಟೆ, ದೋಹಾ ಝೋನ್ ದಶವಾರ್ಷಿಕ ಸಮಿತಿ ಚೇರ್ಮಾನ್ ಕಲಂದರ್ ಶಾಫಿ ಕೋಡಿ , ದಶವಾರ್ಷಿಕ ಸಮಿತಿ ಕನ್ವೀನರ್ ಸಿನಾನ್ ವಕ್ರ, ದೋಹಾ ಝೋನ್ ಪ್ರಧಾನ ಕಾರ್ಯದರ್ಶಿ ಸದಕತುಲ್ಲಾ ಕೂಳೂರು ಉಪಸ್ಥಿತರಿದ್ದರು.
ದುಆ ಮಜ್ಲಿಸ್ ಹಾಗೂ ಪವಿತ್ರ ಖುರ್’ಆನ್ ವಚನದೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ, ಕೆಸಿಎಫ್ ಹಿಲಾಲ್ ಸೆಕ್ಟರ್ ನಾಯಕರಾದ ಶಾಕಿರ್ ಅನ್ವಾರಿ ಸ್ವಾಗತಿಸಿ, ಕೆಸಿಎಫ್ ಅಲ್’ಸದ್ದ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಷಾದ್ ಎಲಿಮಲೆ ರವರು ವಂದಿಸಿದರು. ಕೆಸಿಎಫ್ ದೋಹಾ ಝೋನ್ ಸಂಘಟನೆ ವಿಭಾಗ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಮಿತಿ ನಾಯಕರಾದ ಫಾರೂಖ್ ಜೆಪ್ಪು ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ