ಶಿವಾಜಿ ನಗರದ ಮಸ್ಜಿದುನ್ನೂರ್ ಇದರ ಅಧೀನದಲ್ಲಿರುವ ಸಿದ್ದೀಖಿಯ್ಯ ದ ಅವಾ ದರ್ಸ್” ಇದರ ಪಂಚ ವಾರ್ಷಿಕ ಮಹಾ ಸಮ್ಮೇಳನ ಹಾಗು ತಾಜುಶ್ಶರೀಅ ಉರೂಸ್ ಮುಬಾರಕ್ ನಾಳೆ (ಮಾರ್ಚ್ 7ಕ್ಕೆ) ರಾತ್ರಿ 7 ಗಂಟೆಯಿಂದ ಮಸ್ಜಿದುನ್ನೂರ್ ನಲ್ಲಿ ನಡೆಯಲಿದೆ.
ಈ ಪ್ರಸ್ತುತ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಡಾ! ಫಾರೂಖ್ ನಈಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಪ್ರವಾದಿ ಪ್ರಕೀರ್ತನೆಗಾರ ಸಯ್ಯಿದ್ ತ್ವಾಹ ತಙ್ಙಳ್ ಮದ್ಹ್ ಹಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಯ್ಯಿದ್ ಜಝೀಲ್ ಶಾಮಿಲ್ ಇರ್ಫಾನಿ, ಅನಸ್ ಸಿದ್ದೀಖಿ ಶಿರಿಯ,ಜಾಫರ್ ನೂರಾನಿ ಹಾಗೂ ಹಲವಾರು ಉಲಮಾ , ಉಮರಾ ನೇತಾರರು ಭಾಗವಹಿಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತ ಸಮಿತಿಯು ಪ್ರೀತಿ ಪೂರ್ವಕ ಆಮಂತ್ರಿಸಿದೆ.