janadhvani

Kannada Online News Paper

ಬೃಹತ್ ಇಫ್ತಾರ್ ಸಂಗಮಕ್ಕೆ ಸಜ್ಜುಗೊಳ್ಳುತ್ತಿರುವ ಬಹರೈನ್ ಕೆ.ಸಿ.ಎಫ್

ಬಹರೈನ್ ಸುನ್ನೀ ಕನ್ನಡಿಗರ ಆವೇಶ ಕೆ.ಸಿ.ಎಫ್, ವರ್ಷಂಪ್ರತಿ ನಡೆಸುವ ಬೃಹತ್ ಇಫ್ತಾರ್ ಸಂಗಮಕ್ಕೆ ಸರ್ವ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ.

ಇದು ಕೇವಲ ಇಫ್ತಾರ್ ಮಾತ್ರವಲ್ಲ ಬಹರೈನಿನ ಅಷ್ಟ ದಿಕ್ಕುಗಳಿಂದಲೂ ಆಗಮಿಸುವ ಅನಿವಾಸಿ ಕನ್ನಡಿಗರ ಸಂಗಮವೂ ಆಗಿದೆ.

ದಿನಾಂಕ 1-6-2018 ಶುಕ್ರವಾರ ಸಂಜೆ 5 ಗಂಟೆಗೆ ನಡೆಯುವ ಬೃಹತ್ ಇಫ್ತಾರ್ ಸಂಗಮಕ್ಕೆ ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರೂ, ಕರ್ನಾಟಕ ಎಸ್. ವೈ.ಎಸ್ ಪ್ರಧಾನ ಕಾರ್ಯದರ್ಶಿ, ಭಾಷಣ ರತ್ನ ಎಂ.ಎಸ್.ಎಂ ಝೈನಿ ಕಾಮಿಲ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಲಿದ್ದಾರೆ.

ವಿಶೇಷ ಅತಿಥಿಯಾಗಿ ಪ್ಯಾಲೆಸ್ತೀನ್ ರಾಯಭಾರಿ ಸನ್ಮಾನ್ಯ ತ್ವಾಹ ಎಂ.ಅಬ್ದುಲ್ ಖಾದರ್ ಆಗಮಿಸಿಸಲಿದ್ದಾರೆ. ಅಲ್ಲದೆ ಹಲವಾರು ಉಲಮಾಗಳು, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.

ಬಹರೈನಿನ ವಿವಿಧ ಲೇಬರ್ ಕ್ಯಾಂಪ್ ಗಳಲ್ಲಿ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಆಹ್ವಾನಿಸಿ ಈ ಸಂಗಮದಲ್ಲಿ ಭಾಗವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕೆಂದು ಇಫ್ತಾರ್ ಸ್ವಾಗತ ಸಮಿತಿ ಚೇರ್ಮ್ಯಾನ್ ಜಮಾಲುದ್ದೀನ್ ವಿಟ್ಟಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com