ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶನ ವಿಸಾದಲ್ಲಿ ಬರುವ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡಲಾಗುವುದು ಎಂದು ಟ್ರಾಫಿಕ್ ಡೈರಕ್ಟರೇಟ್ ತಿಳಿಸಿದೆ.
ಕಾಲಾವಧಿಯ ವಿದೇಶಿ ಡ್ರೈವಿಂಗ್ ಪರವಾನಗಿ ಹೊಂದಿರುವ ಚಾಲಕರಿಗೆ ಮಾತ್ರ ಈ ಅನುಮತಿ ಎಂದು ರೈರೆಕ್ಟರೇಟ್ ತಿಳಿಸಿದೆ.
ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ವಿದೇಶೀ ಮಹಿಳೆಯರು ಒಂದು ವರ್ಷದವರೆಗೂ ವಿದೇಶಿ ಪರವಾನಗಿಯನ್ನು ಬಳಸಿ ಚಾಲನೆ ಮಾಡಲು ಅನುಮತಿ ನೀಡಲಾಗುತ್ತದೆ.
ಸೌದಿ ಸಂಚಾರ ನಿರ್ದೇಶನಾಲಯ ಅನುಮೋದಿಸಿದ ಅಂತರರಾಷ್ಟ್ರೀಯ ಚಾಲನಾ ಪರವಾನಗಿಗಳನ್ನು ಹೊಂದಿರುವವರಿಗೆ ಚಾಲನೆ ಮಾಡಲು ಅನುಮತಿ ನೀಡಲಾಗಿದೆ.
ಸೌದಿ ಅರೇಬಿಯಾದಲ್ಲಿ, ಮುಂದಿನ ತಿಂಗಳ 24 ರಿಂದ ಮಹಿಳೆಯರಿಗೆ ವಾಹನ ಚಲಾಯಿಸುವ ಅನುಮತಿ ಜಾರಿಗೆ ಬರಲಿದೆ.ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆನ್ ಲೈನ್ ನೋಂದಣಿ ಪ್ರಾರಂಭಿಸಲಾಗಿದೆ.
ಯುಎಸ್, ಯುರೋಪ್, ಮತ್ತು ಜಿಸಿಸಿ ರಾಷ್ಟ್ರಗಳ ಪರವಾನಗಿ ಪಡೆದವರಿಗೆ ಚಾಲನಾ ಪರೀಕ್ಷೆಯು ಅನ್ವಯವಾಗುತ್ತದೆ.ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪರವಾನಗಿ ನೀಡಲಾಗುತ್ತದೆ.ಮಹಿಳೆಯರಿಗೆ ಪರವಾನಗಿಗಳನ್ನು ನೀಡಲು ಸಿದ್ಧತೆ ಪೂರ್ಣಗೊಂಡಿದೆ ಎಂದು ಟ್ರಾಫಿಕ್ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.