janadhvani

Kannada Online News Paper

ಗಲ್ಫ್ ಯೂತ್ ಕಬಕ ಜಮಾಅತ್ ಮಹಾ ಸಭೆ: ಅಧ್ಯಕ್ಷರಾಗಿ ಅಮ್ಜದ್ ಖಾನ್ ಪೊಳ್ಯ

ಎರಡು ವರ್ಷಗಳ ಹಿಂದೆ ಗಲ್ಫ್ ರಾಷ್ಟ್ರ ದಲ್ಲಿ ದುಡಿಯುತ್ತಿರುವ ಕಬಕ ಜಮಾಅತ್ ಗೆ ಒಳಪಟ್ಟ ಯುವಕರು ಸೇರಿ ಬಡ ನಿರ್ಗತಿಕರ ಸೇವೆಗಾಗಿ ರಚಿಸಿದ ಗಲ್ಫ್ ಯೂತ್ ಕಬಕ ಇದರ ಯಶಶ್ವಿ ಮೂರನೇ ವಷ೯ದ ಮಹಾ ಸಭೆಯು ದಿನಾಂಕ 25-05-2018 ರಂದು ವಾಟ್ಸ್ ಪ್ ಮೂಲಕ ನಡೆಸಲಾಯಿತು.

ಗಲ್ಫ್ ಯೂತ್ ಕಬಕ ಇದರ ಗೌರವಾಧ್ಯಕ್ಷರಾದ ಉಸ್ಮಾನ್ ಹಾಜಿ ಮಸ್ಕತ್ ಅವರು ಸಭೆಗೆ ಚಾಲನೆ ನೀಡಿದರು. ಗಲ್ಫ್ ಯೂತ್ ಕಬಕ ಇದರ ಅಧ್ಯಕ್ಷರಾಗಿದ್ದ ಬಶೀರ್ ಹಾಜಿ ಅವರು ಮಾತನಾಡಿ ಸಂಸ್ಥೆಯ ಯಶಶ್ವಿಗೆ ಸಹಕರಿಸಿದ ಸರ್ವ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ನಂತರ ಪ್ರಧಾನ ಕಾರ್ಯದರ್ಶಿ ಶಮೀರ್ ಕನಾ೯ಟಕ ಇವರು ಕಳೆದ ಸಾಲಿನ ಲೆಕ್ಕ ಮಂಡಿಸಿದರು.ನಂತರ 2018-19 ರ ಸಾಲಿನ ಕಮಿಟಿ ಪುನರ್ ರಚಿಸಲಾಯ್ತು.ಗೌರವ ಅಧ್ಯಕ್ಷರಾಗಿ ಉಸ್ಮಾನ್ ಮಸ್ಕ್ ತ್, ಇಸ್ಮಾಯಿಲ್ ಬಗ್ಮೂಲೆ, ಮತ್ತು ರಫೀಕ್ ಬ್ರೆಟ್,ನಿಕಟಪೂರ್ವ ಅಧ್ಯಕ್ಷರಾದ ಬಶೀರ್ ಹಾಜಿ ಕಬಕ ಅವರನ್ನು ಸಲಹಾ ಮುಖ್ಯಸ್ಥರಾಗಿ ನೇಮಿಸಲಾಯಿತು.ಸಂಚಾಲಕರಾಗಿ ರವೂಫ್ ಕಬಕ ಅವರನ್ನು ಮುಂದುವರಿಸಲಾಯಿತು.

ನೂತನ ಅಧ್ಯಕ್ಷರಾಗಿ ಅಮ್ಜದ್ ಖಾನ್ ಪೊಳ್ಯ, ಉಪಾದ್ಯಕ್ಷರಾಗಿ ಶಾಕೀರ್ ರಾಜಧಾನಿ,ಮಹಮ್ಮದ್ ಬೊಳ್ವಾರ್, ಸಿದ್ದೀಕ್ ಮಸ್ಕತ್.ಕಾರ್ಯದರ್ಶಿಯಾಗಿ ಸಮೀರ್ ಕರ್ನಾಟಕ ಇವರನ್ನು ಮುಂದುವರಿಸಲಾಯಿತು.

ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಝಬರ್ಝಡ್,ರಫೀಕ್ ಅಪ್ಪಿ ಕತಾರ್, ಶಾಫಿ ಬಹ್ರೈನ್ ,ಖಜಾಂಜಿಯಾಗಿ ಆಶಿಕ್ ಕತಾರ್, ಮತ್ತು ಕಲಂದರ್ ಮಿಕ್ದಾದ್(ಊರಿನ ಪ್ರತಿನಿಧಿ),ಜೊತೆ ಖಜಾಂಜಿಗಳಾಗಿ ಶಿಹಾಬ್ ಕಬಕ,ಆಸಿಫ್ ಬಗ್ಗೂಮೂಲೆ, ಮತ್ತು ಅಶ್ರಫ್ ಅರ್ಕ ತಾಜ್ಮಹಲ್ ,ಖಾಲಿದ್ ಕತಾರ್ ಅವರನ್ನು ಮಾದ್ಯಮ ವಕ್ತಾರರಾಗಿ ನೇಮಕಗೊಳಿಸಲಾಯಿತು.

ಕ್ಯಾಬಿನೆಟ್ ಸಲಹಾ ಮೆಂಬರ್ಸ್ ಗಳಾಗಿ ಅಸ್ಲಾಂ ಸಿತಾರ್, ಅನ್ವರ್ ಮಸ್ಕತ್, ರಫೀಕ್ ಅಪ್ಪಿKP, ರಿಯಾಝ್ ಕರ್ನಾಟಕ, ಕಲಂದರ್ ಯೂಸುಫ್, ಹುಸೈನ್ ದಾರಿಮಿ, ಹಮೀದ್ ಬಗ್ಗುಮೂಲೆ, ಇರ್ಫಾನ್ ಓಜಲ, ಸಯೀದ್ ಕರ್ನಾಟಕ, ಶರೀಫ್ ಯಪ್ಪು, ಶಮೀಮ್ ಮಲಬಾರ್ ಗೊಲ್ಡ್, ಮತ್ತು ಅಶ್ರಫ್ ನೌಶದ್ KP ಅವರನ್ನು ಅಲ್ಲದೇ ಹಿರೀಯ ಸಲಹಾ ಮೆಂಬರ್ಸ್ರಗಳಾಗಿ ರಝಾಕ್ ಹಾಜಿ ಮೌಲನಾ, ಇಸ್ಮಾಯಿಲ್ ಬ್ರೈಟ್, ಅಝೀಝ್ ಜಿಝಾನ್, ಸುಲೈಮಾನ್ ಕಬಕಕಾರ್ಸ್, ಮತ್ತು ಮಹಮ್ಮದ್ ಸಿತಾರ್ ಇವರನ್ನು ಅಯ್ಕೆ ಮಾಡಲಾಯಿತು.

ಊರಿನ ಪ್ರತಿನಿಧಿಗಳಾಗಿ ಹಾರಿಸ್ ಯುನೈನ್, ಫಾರುಕ್ ತವಕ್ಕಲ್, ಮತ್ತು ಝುಬೈರ್ ಬ್ರೈಟ್ ಇವರನ್ನು ಮತ್ತು ಕಮಿಟಿಯ ವಾಟ್ಸ್ ಪ್ ಗ್ರೂಪ್ ನ ಅಡ್ಮಿನ್ಸ್ ಗಳಾಗಿ ಅಶ್ರಫ್ ಯುನೈನ್ , ಮತ್ತು ಶಾಫಿ SSR ಅವರನ್ನು ಮುಂದುವರಿಸಲಾಯಿತು.

ಕೊನೆಯಲ್ಲಿ ಕಮಿಟಿಯ ಸಲಹಾ ಸದಸ್ಯರಾದ ಹುಸೈನ್ ದಾರಿಮಿ ಪೊಳ್ಯ ಇವರು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿ ದುವಾರ್ಶಿವಾದವನ್ನು ನೀಡಿದರು.

error: Content is protected !! Not allowed copy content from janadhvani.com