janadhvani

Kannada Online News Paper

ತಿರುವನಂತರಪುರ-ಕಾಸರಗೋಡು ವಂದೇ ಭಾರತ್ ಎಕ್ಸ್ ಪ್ರೆಸ್ ಮಂಗಳೂರಿಗೆ ವಿಸ್ತರಣೆ

ವಂದೇಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಿದ ಅಧಿಕೃತ ತೀರ್ಮಾ ನವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿದ್ಯುಕ್ತವಾಗಿ ಪ್ರಕಟಿಸಿದ್ದಾರೆ.

ಮಂಗಳೂರು: ತಿರುವನಂತರಪುರ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರಿನವರೆಗೆ ವಿಸ್ತರಣೆ ಮಾಡಲಾಗಿದೆ. ರೈಲ್ವೆ ಮಂಡಳಿ ಬುಧವಾರ ಹೊರಡಿಸಿರುವ ಆದೇಶದ ಪ್ರಕಾರ ವಂದೇ ಭಾರತ್ ರೈಲು. ನಂ. 20632/20631 ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ.

ವಂದೇಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಿದ ಅಧಿಕೃತ ತೀರ್ಮಾ ನವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿದ್ಯುಕ್ತವಾಗಿ ಪ್ರಕಟಿಸಿದ್ದಾರೆ.

ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಅಪರಾಹ್ನ 3.05 ಕ್ಕೆ ತಿರುವನಂತಪುರವನ್ನು ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಬಿಟ್ಟು ಮಂಗಳೂರನ್ನು ರಾತ್ರಿ 12.40ಕ್ಕೆ ತಲುಪಲಿದೆ. ಬುಧವಾರವನ್ನು ಹೊರತು ಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ.

ಆದರೆ ಹೀಗೆ ವಿಸ್ತರಿಸಲ್ಪಟ್ಟ ಈ ರೈಲು ಸೇವೆ ಮಂಗಳೂರಿನಿಂದ ಸೇವೆ ಆರಂಭಿಸುವ ದಿನಾಂಕವನ್ನು ಈ ತನಕ ಪ್ರಕಟಿಸಲಾಗಿಲ್ಲ.

error: Content is protected !! Not allowed copy content from janadhvani.com