janadhvani

Kannada Online News Paper

ಸೌದಿ: ಕೆಲಸಕ್ಕೆ ತೆರಳುವ ದಾರಿ ಮಧ್ಯೆ ತಪಾಸಣೆ- ಊರಿನ ವೈದ್ಯರು ನೀಡಿದ ಔಷಧಿಯೊಂದಿಗೆ ಬಂಧನ

ಔಷಧಿಗಳೊಂದಿಗೆ ವೈದ್ಯರ ಸೂಚನೆಗಳು ಮತ್ತು ಪ್ರಿಸ್ಕ್ರಿಪ್ಷನ್ ಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯಲು ಮರೆಯಬಾರದು ಎಂದು ಸಿದ್ದೀಕ್ ವಲಸಿಗರಲ್ಲಿ ಮನವಿ ಮಾಡಿದ್ದಾರೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ನಿಯಂತ್ರಿತ ಡ್ರಗ್ಸ್ ಹೊಂದಿದ್ದಕ್ಕಾಗಿ ಜೈಲಿನಲ್ಲಿದ್ದ ಮಲಯಾಳಿಯೊಬ್ಬರು 60 ದಿನಗಳ ನಂತರ ಬಿಡುಗಡೆಗೊಂಡಿದ್ದಾರೆ. ತಮ್ಮ ಕೈವಶವಿರುವುದು ಊರಿನ ವೈದ್ಯರು ಸೂಚಿಸಿದಂತೆ ಸೇವಿಸಲಾಗುವ ಔಷಧಿ ಎಂಬುದು ಲ್ಯಾಬ್‌ ಪರೀಕ್ಷೆಯಲ್ಲಿ ಕಂಡುಬಂದಿದ್ದು, ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ ಮನವರಿಕೆಯಾದ ಬಳಿಕ ಪಾಲಕ್ಕಾಡ್‌ ಮೂಲದ ಪ್ರಭಾಕರನ್‌ ಐಸಾಕ್‌ ಎಂಬವರನ್ನು ಬಿಡುಗಡೆ ಮಾಡಲಾಗಿದೆ.

ತಬೂಕ್‌ನಲ್ಲಿ ಘನ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅವರು, ರಜೆಯ ಬಳಿಕ ಕೆಲಸಕ್ಕೆ ತೆರಳಿದ್ದ ಮಧ್ಯೆ, ಮಾದಕ ದ್ರವ್ಯ ವಿಭಾಗದ ವಿಶೇಷ ದಳ ಅವರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ತಪಾಸಣೆ ನಡೆಸಿದ್ದು, ಇವರ ಬಳಿ ದೇಶದಿಂದ ತಂದಿದ್ದ ಡ್ರಗ್ಸ್ ಪತ್ತೆಯಾಗಿದೆ. ಇದು ನೋವು ನಿವಾರಕವಾಗಿ ಬಳಸಲಾದ ಮದ್ದು ಎಂದು ತನಿಖಾ ತಂಡಕ್ಕೆ ತಿಳಿಸಿದರೂ, ಅದನ್ನು ಸಾಬೀತುಪಡಿಸಲು ಅವರ ಬಳಿ ಸಾಕಷ್ಟು ದಾಖಲೆಗಳಿರಲಿಲ್ಲ, ಆದ್ದರಿಂದ ಅವರನ್ನು ಬಂಧಿಸಲಾಯಿತು.

ಪ್ರಭಾಕರ್ ಅವರ ಬಿಡುಗಡೆಗಾಗಿ ಹಾಯಿಲ್ ಕೆಎಂಸಿಸಿ ಕಲ್ಯಾಣ ವಿಭಾಗದ ಅಧಿಕಾರಿ ಪಿ.ಎ. ಸಿದ್ದೀಕ್ ಮಟ್ಟನ್ನೂರು ಪ್ರಯತ್ನಿಸಿದ್ದು, ಭಾರತೀಯ ರಾಯಭಾರ ಕಚೇರಿಯಿಂದ ಅನುಮತಿ ಪತ್ರದೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಬಿಡುಗಡೆ ಮಾಡಿದ್ದಾರೆ.

ತಮ್ಮ ಕೈಯಲ್ಲಿರುವ ಔಷಧಿಗಳೊಂದಿಗೆ ವೈದ್ಯರ ಸೂಚನೆಗಳು ಮತ್ತು ಪ್ರಿಸ್ಕ್ರಿಪ್ಷನ್ ಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯಲು ಮರೆಯಬಾರದು ಎಂದು ಸಿದ್ದೀಕ್ ವಲಸಿಗರಲ್ಲಿ ಮನವಿ ಮಾಡಿದ್ದಾರೆ.

(ಫೋಟೋ: ಸಾಂಕೇತಿಕ ಚಿತ್ರ (ಎಡ), ಸಾಮಾಜಿಕ ಕಾರ್ಯಕರ್ತ ಪಿಎ ಸಿದ್ದೀಕ್ ಮಟ್ಟನೂರು ಅವರು ಪ್ರಭಾಕರ ಇಸಾಕ್ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸುತ್ತಿದ್ದಾರೆ (ಬಲ)

error: Content is protected !! Not allowed copy content from janadhvani.com