janadhvani

Kannada Online News Paper

DKSC ಕುವೈಟ್ ರಾಷ್ಟ್ರೀಯ ಸಮಿತಿ- ನೂತನ ಸಾರಥಿಗಳ ಆಯ್ಕೆ

ಕುವೈಟ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆಯು ಶುಕ್ರವಾರ, ಫೆಬ್ರವರಿ 16, 2024 ರಂದು ಸಾಲ್ಮಿಯಾ ಸುನ್ನಿ ಸೆಂಟರ್ ಸಭಾಂಗಣ ಮಗ್ರಿಬ್ ನಮಾಜಿನ ನಂತರ DKSC ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್. ಯೂಸುಫ್ ಅಬ್ಬಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

DKSC ದಮಾಂ ಝೋನ್ ಅಧ್ಯಕ್ಷರಾದ ಅಬ್ದಲ್ ರಹ್ಮಾನ್ ಪಾಣಾಜೆ ಮತ್ತು ಕುವೈತ್ DKSC ಇದರ ರಾಯಭಾರಿ ಅಬ್ದುಲ್ ಅಝೀಝ್ ಮೂಳೂರು ವೀಕ್ಷಕಾರಗಿ ಆಗಮಿಸಿದ್ದರು.
DKSC ಕುವೈಟ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಜನಾಬ್. ಶಫೀಕ್ ಅಹ್ಸನಿ ಉಸ್ತಾದರು ದುವಾ ಆಶೀರ್ವಚನೆಗೈದರು ಮತ್ತು ಮಾಸ್ಟರ್. ಸಾಬಿಕ್ ಕಿರಾಹತ್ ಪಾರಾಯನಗೈದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಗಂಗಾವಳಿಯವರು ಸ್ವಾಗತಿಸಿದರು. ಶಫೀಕ್ ಅಹ್ಸನಿ ಉಸ್ತಾದರವರು ಸಭೆಯನ್ನು ಉದ್ಘಾಟಿಸಿದರು. ಸಂಘಟನಾ ಕಾರ್ಯದರ್ಶಿ ಇಂತಿಯಾಜ್ ಸೂರಿಂಜೆಯವರು ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಅಬ್ದುಲ್ ಲತೀಫ್ ಶೇಡಿಯ ರವರು ಆಯವ್ಯಯ ವರದಿಯನ್ನು ಮಂಡಿಸಿದರು.

ಸಭಾಧ್ಯಕ್ಷರಾದ ಯೂಸುಫ್ ಅಬ್ಬಾಸ್ ರವರು ತಮ್ಮ ಕಾಲಾವಧಿಯಲ್ಲಿ ಸರ್ವ ರೀತಿಯಲ್ಲಿ ಸಹಕರಿಸಿದ ಸರ್ವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಅಧ್ಯಕ್ಷರ ಭಾಷಣವನ್ನು ನೆರವೇರಿಸಿದರು. 2023 ಆಡಳಿತಾವಧಿಯಲ್ಲಿ ಸಂಸ್ಥೆಗೆ ನೀಡಿದ ಸಹಾಯ ಸಹಾಕಾರ ಮತ್ತು ನಿಸ್ವಾರ್ಥ ಸೇವೆಯನ್ನು ನೀಡಿ ಸಹಕರಿಸಿದ ಕುಂಜಾಲ್ ಸಹೋದರರಿಗೆ ಪ್ರಶಂಸಾ ಫಲಕ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಾಬ್. ಅಬ್ದುಲ್ ರಹಿಮಾನ್ ಪಾಣಾಜೆಯವರಿಗೆ ಪ್ರಶಂಸಾ ಫಲಕ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕುವೈಟ್ ರಾಷ್ಟ್ರೀಯ ಸಮಿತಿಯ ಕೇಂದ್ರ ರಾಯಭಾರಿ ಜನಾಬ್. ಅಬ್ದುಲ್ ಅಝೀಜ್ ಮೂಳೂರು ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

2024 ಸಾಲಿನ ಆಡಳಿತ ಸಮಿತಿ

ಅಧ್ಯಕ್ಷರು: ಯೂಸುಫ್ ಅಬ್ಬಾಸ್ ಬಾರೂದ್
ಗೌರವಾಧ್ಯಕ್ಷರುಗಳು: ಉಸ್ತಾದ್ ಅಬ್ದುಲ್ ರಹಿಮಾನ್ ಸಖಾಫಿ ಮತ್ತು ಉಸ್ತಾದ್ ಶಫೀಕ್ ಶಫೀಕ್ ಅಹ್ಸನಿ
ನಿರ್ದೇಶಕ ಮಂಡಳಿ: ಅಬ್ದುಲ್ ರಹಿಮಾನ್ ಕಾನಾ, ಅಬ್ದುಲ್ ಕರೀಂ ಬೀರಲಿ, ಅಬ್ದುಲ್ ಲತೀಫ್ ಶೇಡಿಯಾ ಹಾಗೂ ಇಸ್ಮಾಯಿಲ್ ಉಚ್ಚಿಲ.
ಕಾರ್ಯಾಧ್ಯಕ್ಷರುಗಳು: ಅನ್ವರ್ ಸಾಹೇಬ್ ಕುಂಜಾಲ್ ಮತ್ತು ಶೌಕತ್ ಅಲಿ ಶಿರ್ವ.
ಪ್ರಧಾನ ಕಾರ್ಯದರ್ಶಿ: ಲಿಯಾಕತ್ ಅಲಿ ಗಂಗಾವಳಿ.
ಕೋಶಾಧಿಕಾರಿ: ಇಮ್ತಿಯಾಜ್ ಸೂರಿಂಜೆ .
ಮಾಧ್ಯಮ ಹಾಗೂ ಸಂವಹನ ಕಾರ್ಯದರ್ಶಿ: ತೌಫೀಕ್ ಅಲಿ
ಉಪಾಧ್ಯಕ್ಷರುಗಳು: ಮೊಹಮ್ಮದ್ ಯೂಸುಫ್ ಮುನಿಯಂ, ಮುಹಮ್ಮದ್ ಇಕ್ಬಾಲ್ ಕಂದಾವರ, ಹೈದರ್ ಉಚ್ಚಿಲ, ಮುಬೀನ್ ಸಾಸ್ತಾನ,
ಜೊತೆ ಕಾರ್ಯದರ್ಶಿಗಳು: ಫೈಝಲ್ ಕಾಪು, ಶಂಸುದ್ದೀನ್ ಶಾಬಾನ್ ಉಚ್ಚಿಲ,
ವಿವಿಧ ಸಂಘಟನೆಗಳ ಆಹ್ವಾನಿತ ಪಧಾದಿಕಾರಿಗಳಾದ ಜನಾಬ್. ಶಾಹುಲ್ ಹಮೀದ್ ಸಅದಿ, ಜನಾಬ್. ಬಾದುಷಾ ಸಖಾಫಿ, ಜನಾಬ್. ಹುಸೈನ್ ಎಮ್ಮೆಮ್ಮಾಡ್, ಜನಾಬ್. ಸಯ್ಯದ್ ಬ್ಯಾರಿ, ಜನಾಬ್. ರಫೀಕ್ ಮಂಚಿ ಮುಂತಾದವರುಗಳು ಮಾತನಾಡಿ 2024 ನೇ ಸಾಲಿನ ಸಮಿತಿಗೆ ಆಯ್ಕೆಯಾದ ಹೊಸ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

DKSC ಕುವೈಟ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಕೊನೆಯಲ್ಲಿ ದುಆ ಆಶೀರ್ವಚನಗೈದರು.
ಮೊಹಮ್ಮೆದ್ ಯೂಸುಫ್ ಮುನಿಯಂ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶೌಕತ್ ಅಲಿ ಶಿರ್ವರವರು ಧನ್ಯವಾದ ಸಲ್ಲಿಸಿದರು.
ಸಭೆಯಲ್ಲಿ ಸದಸ್ಯರುಗಳು ಮತ್ತು ವಿವಿಧ ಸಂಘಟನೆಗಳಿಂದ ಆಮಂತ್ರಿತ ಸುಮಾರು 150ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com