janadhvani

Kannada Online News Paper

ಕೆಸಿಎಫ್ ಬಹರೈನ್: ಕೆ.ಸಿ.ಎಫ್ ಡೇ-2024 ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮ

ಮನಾಮ: ಕೆಸಿಎಫ್ ಬಹರೈನ್ ವತಿಯಿಂದ ಕೆ.ಸಿ.ಎಫ್ ಡೇ ಕಾರ್ಯಕ್ರಮವು ತಾಜುಲ್ ಫುಖಾಹಾಅ್ ವೇದಿಕೆಯಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ರಯಾಹೀನ್ ಗಾರ್ಡನ್ ಸನದ್’ನಲ್ಲಿ ವೈವಿಧ್ಯಮಯವಾಗಿ ಜರಗಿತು.

ಕೆಸಿಎಫ್ ಬುದೈಯ್ಯಾ ಸೆಕ್ಟರ್ ಕಾರ್ಯಕರ್ತ ನಿಯಾಝ್ ಕಾಪುರವರು ರಚಿಸಿದ ಕೆಸಿಎಫ್’ನ ಘೋಷ ವಾಕ್ಯದೊಂದಿಗೆ ಕಾರ್ಯಕರ್ತರೆಲ್ಲರೂ ಸೇರಿ ರ‌್ಯಾಲಿ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಉಸ್ತಾದರ ನೇತೃತ್ವದಲ್ಲಿ ನಮ್ಮನ್ನಗಲಿದ ಕರ್ವೆಲ್ ಸಾದಾತ್ ತಂಙಳ್ ‘ರವರ ಹೆಸರಿನಲ್ಲಿ ಖುರ್ಆನ್ ಪಾರಾಯಣ, ತಹ್ಲೀಲ್ ಹಾಗೂ ಜನಾಝ ನಮಾಜ್ ನಡೆಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್’ರವರು ದುಆ ಗೈದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ಕೆಸಿಎಫ್’ನ ಪದ್ಧತಿಗಳನ್ನು, ಆಯಾ ವಿಂಗ್’ಗಳ ಕಾರ್ಯವೈಖರಿಗಳನ್ನು ಸೇರಿದ ಕಾರ್ಯಕರ್ತರಿಗೆ ಭಾವಚಿತ್ರದೊಂದಿಗೆ ತೋರಿಸುತ್ತಾ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು.ಕೆಸಿಎಫ್ ಗುದೈಬಿಯಾ ಸೆಕ್ಟರ್ ಉಪಾಧ್ಯಕ್ಷರಾದ ಪರಪ್ಪ ಶಿಹಾಬ್ ಉಸ್ತಾದರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು.

ನಂತರ ರಸಪ್ರಶ್ನೆ, ದಫ್ ಪ್ರದರ್ಶನ, ಪ್ರತಿಭೋತ್ಸವ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ಜರಗಿತು. ನಿಯಾಝ್ ಕಾಪುರವರು ಕೆಸಿಎಫ್’ನ ಕುರಿತು ರಚಿಸಿದ ಕಾವ್ಯವನ್ನು ಮಧುರ ಕಂಠದಿಂದ ಹಾಡಿ ಜನಮನ ಸೆಳೆದರು.

ಸಮಾರೋಪ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಇದೇ ಬರುವ ಏಪ್ರಿಲ್ 21 ರಂದು ಮಂಗಳೂರಿನಲ್ಲಿ ನಡೆಯಲಿರುವ ಕೆ.ಸಿ.ಎಫ್ ದಶಮಾನೋತ್ಸವದ ಐತಿಹಾಸಿಕ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಕೆ.ಸಿ.ಎಫ್ ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಇಂದು ನಡೆದ ಈ ಯಶಸ್ವಿ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯಾಚರಿಸಲು ಸ್ಪೂರ್ತಿಯನ್ನು ನೀಡಲಿ ಎಂದರು.

ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು ರವರಿಗೆ ನೆನಪಿನ ಕಾಣಿಕೆಯನ್ನು ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ನಂತರ ಈ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಬೆಳ್ಮ ಹಾಗೂ ಮನಾಮ ಹಾರ್ಬರ್ ನದಿ ಕಿನಾರೆಯ ಪಾರ್ಕಿನಲ್ಲಿ ಕೆಸಿಎಫ್’ನ ಸಭೆ ನಡೆಸಲು ವಾಹನ ಸೌಕರ್ಯವನ್ನು ನೀಡಿ ಸಹಕರಿಸಿದ ಹಮೀದ್ ಒಕ್ಕೆತ್ತೂರು ಅವರ ಅನುಪಸ್ಥಿತಿಯಲ್ಲಿ ಅವರ ಬಾವ ಮುಹರ್ರಕ್ ಸೆಕ್ಟರ್ ಉಪಾಧ್ಯಕ್ಷರಾದ ರಶೀದ್ ಅಡ್ಯಾರ್ ಅವರನ್ನು ಸನ್ಮಾನಿಸಲಾಯಿತು.

ವಿವಿಧ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಸೆಕ್ಟರುಗಳ ಕಾರ್ಯಕರ್ತರು ಭಾಗವಹಿಸಿ, ಗುದೈಬಿಯಾ ಪ್ರಥಮ ಸ್ಥಾನ, ಮುಹರ್ರಕ್ ದ್ವಿತೀಯ ಸ್ಥಾನ, ರಫಾ ತೃತೀಯ ಸ್ಥಾನವನ್ನು ಪಡೆಯಿತು.
ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಪ್ರತಿಭೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕೆಸಿಎಫ್ ಗುದೈಬಿಯಾ ಸೆಕ್ಟರ್ ಚ್ಯಾಂಪಿಯನ್ ಶಿಪ್’ನ್ನು ತನ್ನದಾಗಿಸಿಕೊಂಡಿತು.

ಕೆ.ಸಿ.ಎಫ್ ಬಹರೈನ್ ಸ್ಥಾಪಕ ಅಧ್ಯಕ್ಷರಾದ ಜನಾಬ್ ಫಾರೂಕ್ ಎಸ್.ಎಂ., ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಹಾಗೂ ಕೆಸಿಎಫ್ ರಾಷ್ಟೀಯ ಸಮಿತಿಯ ನಾಯಕರು ಉಪಸ್ಥಿತರಿದ್ದರು. ಕೆಸಿಎಫ್ ಝೋನಲ್ ಹಾಗೂ ಸೆಕ್ಟರಿನಿಂದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ಧನ್ಯವಾದ ಸಮರ್ಪಿಸಿದರು.

ವರದಿ: ಎಂ.ಎ. ವೇಣೂರು
(ಪಬ್ಲಿಕೇಶನ್ ವಿಂಗ್, ಕೆಸಿಎಫ್ ಬಹರೈನ್)

error: Content is protected !! Not allowed copy content from janadhvani.com