janadhvani

Kannada Online News Paper

‘ಸಂವಿಧಾನ ಜಾಗೃತಿ ಜಾಥಾ’- ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಪೂರ್ವಭಾವಿ ಸಭೆ

ಸಂವಿಧಾನ ಪೀಠಿಕೆಯ ಆಶಯ ಮತ್ತು ಮೌಲ್ಯಗಳನ್ನು ಸ್ಥಬ್ದ ಚಿತ್ರ ಮೂಲಕ ಜನರಿಗೆ ತಿಳಿಸುವ ಸಲುವಾಗಿ ಫೆ.17 ರಂದು ಅಪರಾಹ್ನ 3 ಗಂಟೆಗೆ ‘ಸಂವಿಧಾನ ಜಾಗೃತಿ ಜಾಥಾ’ ಆಗಮಿಸುವ ಸಂದರ್ಭದಲ್ಲಿ ಜಾಥಾವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ರೂಪು ರೇಶೆಗಳ ಬಗ್ಗೆ ಚರ್ಚಿಸಲು ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಪೂರ್ವಭಾವಿ ಸಭೆಯು ಫೆ. 14 ರಂದು ನಡೆಯಿತು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಅರ್ ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವ ಸಂಧರ್ಭದಲ್ಲಿ ಅಗತ್ಯ ಸಹಕಾರ ನೀಡಲು ಎಲ್ಲಾ ಜನಪ್ರತಿನಿಧಿಗಳು. ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿ ಜಾಥಾದ ಯಶಸ್ವಿಗೆ ಸಹಕರಿಸಲು ಕೋರಿದರು.

ಅಲ್ಲದೆ ಸಂಪಾಜೆಯಿಂದ ಆಗಮಿಸುವ ಸಂವಿಧಾನ ಜಾಥಾ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಲಡ್ಕದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿ ವಾಹನ ಜಾಥಾದೊಂದಿಗೆ ಸ್ವಾಗತಿಸಲು ನಿರ್ಧರಿಸಲಾಯಿತು. ಮಸೀದಿಯ ಸಮೀಪ ಅರಂತೋಡು ಗ್ರಾಮ ಪಂಚಾಯತ್ ವಠಾರದವರೆಗೆ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ವಿಧ್ಯಾರ್ಥಿಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಗ್ರಾಮ ಪಂಚಾಯತ್ ವಠಾರದಲ್ಲಿ ಸಮಾಪ್ತಿ ಗೊಂಡು ಸಮಾವೇಶ ಮಾಡುವುದೆಂದು ನಿರ್ಧರಿಸಲಾಯಿತು ಮತ್ತು ಸಂವಿಧಾನ ವೈಶಿಷ್ಟ್ಯಗಳ ಬಗ್ಗೆ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ದೆ ನಡೆಸಲು ತೀರ್ಮಾನಿಸಲಾಯಿತು.

ಚರ್ಚೆಯಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವ್ರತ್ತ ಪ್ರಾಂಶುಪಾಲ ಕೆ.ಆರ್ ಗಂಗಾದರ್ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ಕೆ.ಆರ್ ಪಧ್ಮನಾಭ ಕುರಂಜಿ, ಅಶ್ರಫ್ ಗುಂಡಿ, ತೀರ್ಥರಾಮ ಅಡ್ಕಬಳೆ ಭಾಗವಹಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭವಾನಿ ಚಿಟ್ಟನ್ನೂರ್, ಮಾಜಿ ಉಪಾಧ್ಯಕ್ಷೆ ಶ್ವೇತ ಅರಮನೆಗಾಯ, ಸದಸ್ಯ ರವೀಂದ್ರ ಪಂಜಿಕೋಡಿ, ತಾಜುದ್ಧೀನ್ ಅರಂತೋಡು, ತಿಮ್ಮಯ್ಯ ಮೆತ್ತಡ್ಕ, ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರ್ತಿ ಸುಮತಿ ಅಡ್ಕಬಳೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಮಂಜುಳಾ ಮೊದಲಾದವರು ಭಾಗವಹಿಸಿದರು.

error: Content is protected !! Not allowed copy content from janadhvani.com