janadhvani

Kannada Online News Paper

ಕಲ್ಲಡ್ಕದಲ್ಲಿ ಇತಿಹಾಸ ನಿರ್ಮಿಸಿದ ಕಲ್ಲಡ್ಕ ಪ್ರೀಮಿಯರ್ ಲೀಗ್ -2024 ಸೀಸನ್ 8

ಬಂಟ್ವ‍ಾಳ :I.N BOYS ಕಲ್ಲಡ್ಕ ಇದರ ಆಶ್ರಯದಲ್ಲಿ ಆಯೋಜಿಸಿದ ಸತತ 2 ದಿವಸಗಳ ಅಂಡರ್ ಆರ್ಮ್ ಹೊನಲು ಬೆಳಕಿನ ಕಲ್ಲಡ್ಕ ಪ್ರೀಮಿಯರ್ ಲೀಗ್ -2024 ಸೀಸನ್ 8 ಕಲ್ಲಡ್ಕ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ಘಟಾನುಘಟಿ ತಂಡಗಳಾದ ಸೆವೆನ್ ಸ್ಟಾರ್ ಕಲ್ಪನೆ , ಎಕ್ಸ್ ಅಟ್ಯಾಕರ್ಸ್ , ಜಝ ಕಲ್ಲಡ್ಕ , ಇಕ್ಕ ವಾರಿಯರ್ಸ್ , ಮೊಂಝ ಇಲೆವೆನ್ , ಹಿಲ್ಲ್ ಟೌನ್ ಕಲ್ಲಡ್ಕ ಮುಂತಾದ ಆರು ತಂಡಗಳು ಭಾಗವಹಿಸಿದ್ದವು.

ಹಲವಾರು ಗಣ್ಯಾತಿಗಣ್ಯರು , ಮೈದಾನತುಂಬಾ ಕ್ರೀಡಾ ಪ್ರೇಕ್ಷಕರು ,ಬಲಿಷ್ಠ 6 ತಂಡಗಳು , ಹದ್ದಿನ ಕಣ್ಣಿನ ಮುದ್ದಿನ ತೀರ್ಪುಗಾರರು , ಮಂಗಳೂರಿನ ಪ್ರತಿಷ್ಠಿತ ವೀಕ್ಷಣೆ ವಿವರಣೆಗಾರರು , ನಾಸಿಕ್ ಬ್ಯಾಂಡ್ ಗಳು , ಸಿಡಿಮದ್ದುಗಳು , ಯೂಟ್ಯೂಬ್ ಲೈವ್ , ಎಲ್ಲವೂ ಸೇರಿ ನಿನ್ನೆ ಕಲ್ಲಡ್ಕದಲ್ಲಿ ಸಂಭ್ರಮ ಸಡಗರದ ಹಬ್ಬವಾಗಿತ್ತು.

ಪಂದ್ಯಾಟದಲ್ಲಿ ಮೊಂಝ ಇಲೆವೆನ್ ತಂಡ ಚಾಂಪಿಯಯನ್ನಾಗಿ ಹೊರಹೊಮ್ಮಿದರೆ, ಎಕ್ಸ್ ಅಟ್ಯಾಕರ್ಸ್ ತಂಡ ಧ್ವಿತೀಯ ಸ್ಥಾನಗೆದ್ದುಕೊಂಡಿತು , ಸರಣಿ ಸ್ರೇಷ್ಟ ಪ್ರಶಸ್ತಿ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಕಲ್ಲಡ್ಕದ ಹೆಮ್ಮೆಯ ಆಟಗಾರ ಬೂಮ್ ಬೂಮ್ ರಶೀದ್ ಬಾಬ ಆಯ್ಕೆಯಾದರು ,ಉತ್ತಮ ಬ್ಯಾಟ್ಸ್ ಮೆನ್ ಆಗಿ ಕಿರಣ್ ಕಲ್ಲಡ್ಕ , ಬೆಸ್ಟ್ ಕೀಪರ್ ಆಗಿ ಮುಜೀಬ್ ಕಲ್ಲಡ್ಕ , ಆಯ್ಕೆಯಾದರು ಉತ್ತಮ ಫೀಲ್ಡರ್ ಆಗಿ ನಾಚಿ ನಾಸಿರ್ ಆಯ್ಕೆಯಾದರು , ಬೆಸ್ಟ್ ಬೌಲರ್ ಆಗಿ ಹಾರಿಸ್ ಐ ಎನ್ ಆಯ್ಕೆಯಾದರು ಅದೇ ರೀತಿ ಭಾಗವಹಿಸಿದ ಎಲ್ಲಾ ತಂಡಕ್ಕೂ ಸ್ಮರಣಿಕೆ ನೀಡಿ ಗೌರವಿಸಿತು ಕ್ರೀಡಾಕೂಟದಲ್ಲಿ ವಾಯ್ಸ್ ಆಫ್ ಬಂಟ್ವಾಳ ಅಶ್ರಫ್ ಅರಬಿ ಕಲ್ಲಡ್ಕ ಅವರು ಆಗಮಿಸಿದ ಎಲ್ಲರನ್ನು ಗೌರವಿಸಿ ವಂದಿಸಿದರು.

ವರದಿ: ಕೆ.ಕೆ ಜಬ್ಬಾರ್ ಕಲ್ಲಡ್ಕ

error: Content is protected !! Not allowed copy content from janadhvani.com