janadhvani

Kannada Online News Paper

ದೇಶಾದ್ಯಂತ ಯುಪಿಐ ಪಾವತಿ ಬ್ಯಾಂಕಿಂಗ್ ಸ್ಥಗಿತ- ಗ್ರಾಹಕರ ಪರದಾಟ

ಯುಪಿಐ-ಸಕ್ರಿಯಗೊಳಿಸಿದ ಅಪ್ಲಿಕೇಶನ್ ಗಳ ಮೂಲಕ ವಹಿವಾಟು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹಲವಾರು ಬಳಕೆದಾರರು ವರದಿ ಮಾಡಿದ್ದಾರೆ.

ನವದೆಹಲಿ: ದೇಶಾದ್ಯಂತ ಇಂದು ಯುಪಿಐ ಪಾವತಿ ಬ್ಯಾಂಕಿಂಗ್ ಸರ್ವರ್ ಡೌನ್ ಆಗುವ ಮೂಲಕ, ಗ್ರಾಹಕರು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರವು ದೇಶಾದ್ಯಂತ ಸ್ಥಗಿತವನ್ನು ಅನುಭವಿಸುತ್ತಿದೆ.
ಗೂಗಲ್ ಪೇ, ಫೋನ್ ಪೇ,ಭೀಮ್, ಪೇಟಿಎಂನಂತಹ ಯುಪಿಐ-ಸಕ್ರಿಯಗೊಳಿಸಿದ ಅಪ್ಲಿಕೇಶನ್ ಗಳ ಮೂಲಕ ವಹಿವಾಟು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹಲವಾರು ಬಳಕೆದಾರರು ವರದಿ ಮಾಡಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್ಸಾರ್ಮ್ – ಎಕ್ಸಲ್ಲಿ ಸುಮಾರು 3 ರಿಂದ 4 ಗಂಟೆಗಳ ಹಿಂದೆ ಯುಪಿಐ ಪಾವತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.

error: Content is protected !! Not allowed copy content from janadhvani.com