janadhvani

Kannada Online News Paper

ಕೆಸಿಎಫ್ ಯುಎಇ: ಮಹಬ್ಬ ಫ್ಯಾಮಿಲಿ ಫೆಸ್ಟ್ ಯಶಸ್ವಿಗೆ ಕರೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಯುಎಇ ವತಿಯಿಂದ ‘ಮಹಬ್ಬ’ ಫ್ಯಾಮಿಲಿ ಫೆಸ್ಟ್-24 ಕಾರ್ಯಕ್ರಮವು ಫೆ.11 ಭಾನುವಾರ ಶಾರ್ಜಾ ಅಲ್ ಬತೀಹ್ ಪಾರ್ಕಿನಲ್ಲಿ ನಡೆಯಲಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಮೂಸಾ ಹಾಜಿ ಬಸರ ತಿಳಿಸಿದರು. ಅವರು ಫೆ.4 ಭಾನುವಾರ ದುಬೈನ ಅಲ್ ಖಿಸೈಸಿನಲ್ಲಿರುವ ಸಅದಿಯ್ಯ ಭವನದಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಲ್ಪಡುವ ‘ಮಹಬ್ಬ’ ಕಾರ್ಯಕ್ರಮವು ಈ ಬಾರಿ ಬೆಳಗ್ಗೆ ಎಂಟು ಗಂಟೆಯಿಂದ ಸಾಯಾಂಕಾಲ ಎಂಟರವರೆಗೆ ನಡೆಯಲಿದ್ದು, ಯುಎಇಯ ಏಳು ವಲಯಗಳಿಂದ 500 ಕ್ಕೂ ಮಿಕ್ಕ ಕನ್ನಡಿಗ ಕುಟುಂಬಗಳು ಹಾಗೂ 1500 ಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ವಿವಿಧ ಸ್ಪರ್ಧೆಗಳು, ಚಟುವಟಿಕೆಗಳು, ಧಾರ್ಮಿಕ ತರಗತಿಗಳು ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್, ಉಧ್ಯಮಿಗಳಾದ ಯುಟಿ ಇಫ್ತಿಖಾರ್, ಮುಮ್ತಾಝ್ ಅಲಿ ಮಂಗಳೂರು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ ಪಿ.ಎಂ ಹೆಚ್ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹ್ರೈನ್, ಶಿಕ್ಷಣ ವಿಭಾಗ ಅಧ್ಯಕ್ಷ ಹಮೀದ್ ಸಅದಿ ಅಬುಧಾಬಿ, ವೆಲ್ಫೇರ್ ಅಧ್ಯಕ್ಷ ಅಬೂಬಕರ್ ಹಾಜಿ ರೈಸ್ಕೋ, ಕಾರ್ಯದರ್ಶಿ ಇಕ್ಬಾಲ್ ಬರಕ, ಸಂಘಟನಾ ಅಧ್ಯಕ್ಷ ಜಲೀಲ್ ನಿಝಾಮಿ ಸೇರಿದಂತೆ ಹಲವು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ದಶವಾರ್ಷಿಕವನ್ನು ಆಚರಿಸುತ್ತಿರುವ ಕೆಸಿಎಫ್ ಮಹಬ್ಬ ಕಾರ್ಯಕ್ರಮದಲ್ಲಿ ತನ್ನ ಹತ್ತು ವರ್ಷಗಳ ಪಯಣದ ಸಾಧನೆಗಳ ಕುರಿತಾದ ಕಿರು ಹೊತ್ತಗೆಯು ಬಿಡುಗಡೆಗೊಳ್ಳಲಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ತಿಳಿಸಿದರು. ಸಮಾರಂಭದಲ್ಲಿ ಅನಿವಾಸಿ ಕನ್ನಡಿಗರಾಗಿ 40 ವರ್ಷಗಳ ಕಾಲ ಯುಎಇ ಯಲ್ಲಿ ನೆಲೆಸಿದ ಕನ್ನಡಿಗರನ್ನು ಗುರುತಿಸಿ ಸನ್ಮಾನಿಸಲಾಗುವು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಎಫ್ ಐಸಿ ಪಬ್ಲೀಕೇಶನ್ ಕನ್ವೀನರ್ ಕರೀಂ ಮುಸ್ಲಿಯಾರ್, ಕೆಸಿಎಫ್ ಐಸಿ ಸಮಿತಿ ಸದಸ್ಯ ಉಸ್ಮಾನ್ ಹಾಜಿ ನಾಪೊಕ್ಲು, ಮಹಬ್ಬ-2024 ಚೇರ್ ಮಾನ್ ಝೈನುದ್ದೀನ್ ಹಾಜಿ, ಬೆಳ್ಳಾರೆ ಕನ್ವೀನರ್ ಇಬ್ರಾಹಿಂ ಹಾಜಿ ಬ್ರೈಟ್, ಕೆಸಿಎಫ್ ಯುಎಇ ಶಿಕ್ಷಣ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ ಹಾಗೂ ಶುಕೂರು ಉಳ್ಳಾಲ ಭಾಗವಹಿಸಿದ್ದರು.

ವರದಿ: ಸಫ್ವಾನ್ ತುರ್ಕಳಿಕೆ, ಶಾರ್ಜಾ

error: Content is protected !! Not allowed copy content from janadhvani.com