janadhvani

Kannada Online News Paper

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಫರಂಗಿಪೇಟೆ- ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಪುನರಾಯ್ಕೆ

ಬಂಟ್ವಾಳ: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ 2024-25ರ ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಮಾರಿಪಳ್ಳ ರವರು ಪುನರಾಯ್ಕೆಯಾಗಿದ್ದಾರೆ.

ಬಿ.ಸಿ ರೋಡ್ ತಲಪಾಡಿ ಡೈಮಂಡ್ ಕ್ಯಾಂಪಸ್ ನಲ್ಲಿ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ ಸಲಹೆಗಾರ ಹನೀಫ್ ಖಾನ್ ಕೋಡಾಜೆ ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಂತರ ಮಾತಾಡಿದವರು ಕಳೆದ 11 ವರ್ಷಗಳಿಂದ ಸಂಸ್ಥೆಯು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಅಲ್ಲದೇ ಹಿಜಾಮ, ಬೃಹತ್ ರಕ್ತದಾನ ಶಿಬಿರ, ಡ್ರಗ್ಸ್ ಮುಕ್ತ ಜನ ಜಾಗೃತಿ ಅಭಿಯಾನದಂತಹ ಕಾರ್ಯಕ್ರಮಗಳಲ್ಲಿ ಯಶಸ್ವಿಯನ್ನು ಕಂಡಿರುವುದು ಶ್ಲಾಘನ್ಯವಾಗಿದೆ ಎಂದುರು.

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಸದಸ್ಯರಾದ ರಝಾಕ್ ಬಲ್ಲಾಳ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪದಾಧಿಕಾರಿಗಳ ವಿವರ ಇಂತಿವೆ.

ಸಲಹಾ ಸಮಿತಿ ಮುಖ್ಯಸ್ಥರಾಗಿ ಹನೀಫ್ ಖಾನ್ ಕೋಡಾಜೆ, ಅಬ್ದುಲ್ ಖಾದರ್ ಅರಫಾ, ಶಬೀರ್ ಕೆಂಪಿ, ಗೌರವಾಧ್ಯಕ್ಷರಾಗಿ ಎಸ್.ಎಂ ಬಾಷ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಅರಫಾ, ರಝಾಕ್ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಡೈಮಂಡ್ ಅಲ್ತಾಫ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿಯಾಗಿ ಮಲಿಕ್ ಕುಂಪನಮಜಲು, ಆರೋಗ್ಯ ವಿಭಾಗದ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ಶಿಕ್ಷಣ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಅರಫಾ, ಕ್ರೀಡಾ ವಿಭಾಗ ಕಾರ್ಯದರ್ಶಿ ಗಪೂರ್ ಹಸನ್ ಪುಂಚಮೆ, ಮೂಲ ಸೌಕರ್ಯ ವಿಭಾಗದ ಕಾರ್ಯದರ್ಶಿ ಇಮ್ರಾನ್ ಮಾರಿಪಳ್ಳ, ಕೋಶಾಧಿಕಾರಿ ಮುಸ್ತಫ ಮೇಲ್ಮನೆ, ಸಂಘಟನಾ ಕಾರ್ಯದರ್ಶಿ ಸಲಾಂ ಸುಜೀರ್, ಸಂಚಾಲಕರಾಗಿ ಅಸೀಫ್ ಬಜಾಲ್ ಆಯ್ಕೆಯಾದರು.

ಕಾರ್ಯಕಾರಣಿ ಸಮಿತಿಯ ನೂತನ ಸದಸ್ಯರಾಗಿ ಅಸೀಫ್ ಮೇಲ್ಮನೆ, ಶಾಹುಲ್ ಹಮೀದ್, ಹಕೀಂ ಮಾರಿಪಳ್ಳ, ಹರ್ಷದ್ ವಳವೂರು, ಜಾಫರ್ ಟಿ. ಎಚ್, ಅಶ್ರಫ್ ಮಲ್ಲಿ, ಅನೀಸ್ ಮಾರಿಪಳ್ಳ, ರಿಯಾಝ್ ಕುಂಪನಮಜಲು ಆಯ್ಕೆಯಾದರು.

ಹಾಶೀರ್ ಪೇರಿಮಾರ್ ಸ್ವಾಗತಿಸಿದರು, ಸಲಾಂ ಸುಜೀರ್ ವಾರ್ಷಿಕ ವರದಿ ವಾಚಿಸಿದರು, ಡೈಮಂಡ್ ಅಲ್ತಾಫ್ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com