janadhvani

Kannada Online News Paper

ಮದೀನಾ: ರೌಳಾ ಷರೀಫ್‌ ಪ್ರವೇಶಕ್ಕೆ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ

ತಮ್ಮನ್ನು ಬರಮಾಡಿಕೊಂಡು ಅಗತ್ಯ ನಿರ್ದೇಶನಗಳನ್ನು ನೀಡಲು ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಯೂ ಇರಲಿದ್ದಾರೆ.

ಮದೀನಾದ ಮಸ್ಜಿದ್ದುನ್ನಬವಿಯಲ್ಲಿರುವ ರೌಳಾ ಶರೀಫ್‌ನಲ್ಲಿ ನಮಾಜ್ ಮಾಡಲು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಹೊಸ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಹೊಸ ಬದಲಾವಣೆಯು ರೌಳಾ ಷರೀಫ್‌ಗೆ ಬರುವ ವಿಶ್ವಾಸಿಗಳಿಗೆ ಪ್ರವೇಶ ಮತ್ತು ಕಾರ್ಯಗಳನ್ನು ಸುಲಭಗೊಳಿಸುವ ಒಂದು ಭಾಗವಾಗಿದೆ.

ಜನದಟ್ಟಣೆ ಹಿನ್ನೆಲೆಯಲ್ಲಿ ಮದೀನಾದಲ್ಲಿರುವ ರೌಳಾ ಶರೀಫ್‌ಗೆ ವರ್ಷಕ್ಕೊಮ್ಮೆ ಪ್ರವೇಶವೆಂದು ಇತ್ತೀಚೆಗೆ ನಿಯಂತ್ರಣ ಏರ್ಪಡಿಸಲಾಗಿದೆ. ಇದನ್ನು ಕಾರ್ಯಗತಗೊಳಿಸುವ ಭಾಗವಾಗಿ ಹೊಸ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ.

ಹೊಸ ವ್ಯವಸ್ಥೆ ಪ್ರಕಾರ, ನುಸುಕ್ ಪ್ಲಾಟ್‌ಫಾರ್ಮ್ ಮೂಲಕ ಪರವಾನಗಿ ಪಡೆದವರು ನಿಗದಿತ ಸಮಯಕ್ಕಿಂತ 24 ಗಂಟೆಗಳ ಮೊದಲು ತಮ್ಮ ಭೇಟಿಯನ್ನು ಖಚಿತಪಡಿಸಲು ಅಥವಾ ರದ್ದುಗೊಳಿಸಲು ಕೇಳಲಾಗುತ್ತದೆ. ಸಂದರ್ಶಕರು ಮಸ್ಜಿದುನ್ನಬವಿಯ ಅಂಗಳವನ್ನು ತಲುಪಿದಾಕ್ಷಣ, ಪರದೆಗಳು ಪ್ರವೇಶದ್ವಾರದ ದಾರಿಯನ್ನು ತೋರಿಸುತ್ತವೆ. ತಮ್ಮನ್ನು ಬರಮಾಡಿಕೊಂಡು ಅಗತ್ಯ ನಿರ್ದೇಶನಗಳನ್ನು ನೀಡಲು ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಯೂ ಇರಲಿದ್ದಾರೆ. ನಂತರ ಸಂದರ್ಶಕರು ಸ್ವಯಂ ಚಾಲಿತ ಗೇಟ್‌ಗಳನ್ನು ತಲುಪಬೇಕು, ಪರವಾನಗಿಯಲ್ಲಿರುವ ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಕಾಯುವ(Waiting) ಪ್ರದೇಶವನ್ನು ಪ್ರವೇಶಿಸಬೇಕು.

ಸೂಚನೆ ಲಭಿಸಿದಾಗ ವಿಶ್ವಾಸಿಗಳು ಕಾಯುವ ಕೇಂದ್ರದಿಂದ ವಿಶೇಷ ಲೇನ್ ಮೂಲಕ ರೌದಾ ಶರೀಫ್‌ಗೆ ತೆರಳಬೇಕು. ಭೇಟಿಯ ಸಮಯಗಳು ಮುಗಿದಾಗ ನಿರ್ಗಮನಕ್ಕೆ ಸೂಚಿಸಲಾಗುವುದು. ಹೊಸ ವ್ಯವಸ್ಥೆಗಳು ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಸಂವೇದಕಗಳ ಸಹಾಯದಿಂದ ಸುಧಾರಿತ ಡಿಜಿಟಲ್ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತವೆ.

ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

error: Content is protected !! Not allowed copy content from janadhvani.com