ದುಬೈ: ಯುಎಇಯಲ್ಲಿನ ಸಂಸ್ಥೆಗಳಲ್ಲಿ ಶೇ 20ರಷ್ಟು ಉದ್ಯೋಗಿಗಳು ವಿವಿಧ ದೇಶಗಳಿಂದ ಬಂದವರಾಗಿರಬೇಕು ಎಂಬ ನಿಯಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯರು ಸೇರಿದಂತೆ ಎಲ್ಲಾ ಅರ್ಜಿದಾರರಿಗೆ ವೀಸಾಗಳನ್ನು ನೀಡಲಾಗಿದೆ ಎಂದು ವಿವಿಧ ಟ್ರಾವೆಲ್ ಏಜೆನ್ಸಿಗಳು ಮತ್ತು ಟೈಪಿಂಗ್ ಕೇಂದ್ರಗಳು ತಿಳಿಸಿವೆ. ಸಂಸ್ಥೆಗಳಲ್ಲಿ ಜನಸಂಖ್ಯಾ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಯುಎಇಯ ನಿರ್ದೇಶನವನ್ನು ಬಿಗಿಗೊಳಿಸುವುದು ವಲಸಿಗರಲ್ಲಿ ಆತಂಕವನ್ನು ಉಂಟುಮಾಡಿತ್ತು.
20 ಪ್ರತಿಶತಕ ಉದ್ಯೋಗಿಗಳ ಕಾರ್ಯದಲ್ಲಿ ಯುಎಇಯ ನಿರ್ದೇಶವನ್ನು ಪಾಲಿಸುವ ಕಂಪನಿಗಳಿಗೆ ಉಳಿದಿರುವ ಹುದ್ದೆಗಳಿಗೆ ತಮ್ಮ ದೇಶದವರನ್ನು ನೇಮಿಸಿಕೊಳ್ಳಬಹುದಾಗಿದೆ. ವೀಸಾಗಳಿಗೆ ಅರ್ಜಿ ಸಲ್ಲಿಸುವಾಗ ನಿರ್ದೇಶನವನ್ನು ಅನುಸರಿಸದ ಕಂಪನಿಗಳಿಗೆ ವೀಸಾ ತಿರಸ್ಕರಿಸಲಾಗುತ್ತದೆ ಎಂದು ಯುಎಇಯ ಕಾನೂನು ತಜ್ಞರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಉದ್ಯೋಗ ಬದಲಾವಣೆಗೆ ಮುಂದಾಗಿದ್ದವರು ಹಾಗೂ ವಿಸಿಟರ್ ವೀಸಾದಲ್ಲಿ ಉದ್ಯೋಗ ಅರಸಿ ಬಂದವರು ಆತಂಕಕ್ಕೆ ಒಳಗಾಗಿದ್ದರು. ಭಾರತೀಯರಿಗೆ ಯು.ಎ.ಇ ವೀಸಾ ನಿರಾಕರಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನೂ ಹರಡಲಾಗಿತ್ತು. ಅದೇ ಸಮಯದಲ್ಲಿ, ಕೆಲವು ಸಂಸ್ಥೆಗಳು ವೀಸಾ ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ ಎಂದು ಟ್ರಾವೆಲ್ ಏಜೆನ್ಸಿಗಳು ಹೇಳಿದ್ದಾರೆ.