janadhvani

Kannada Online News Paper

ಸೌದಿ: ಈದ್ ರಜೆಗಳ ಪರಿಷ್ಕರಣೆ- ಗರಿಷ್ಠ ಐದು ದಿನಗಳಿಗೆ ಸೀಮಿತಗೊಳಿಸಲು ನಿರ್ಧಾರ

ರಿಯಾದ್: ಸೌದಿ ಅರೇಬಿಯಾದಲ್ಲಿ ಈದ್ ರಜಾ ದಿನಗಳನ್ನು ಪರಿಷ್ಕರಿಸಲಾಗಿದೆ.

ಕಳೆದ ಮಂಗಳವಾರ ರಿಯಾದ್‌ನಲ್ಲಿ ದೊರೆ ಸಲ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಮಟ್ಟದ ಈದ್-ಉಲ್-ಫಿತರ್ ಮತ್ತು ಈದ್-ಉಲ್-ಅದ್ಹಾ ಅಧಿಕೃತ ರಜೆಗಳನ್ನು ಗರಿಷ್ಠ ಐದು ದಿನಗಳಾಗಿ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ, ಚಂದ್ರ ದರ್ಶನಕ್ಕೆ ಅನುಗುಣವಾಗಿ, ವಾರಾಂತ್ಯ ರಜೆಗಳೊಂದಿಗೆ ಕೆಲವೊಮ್ಮೆ ಒಂದು ವಾರಕ್ಕಿಂತಲೂ ಹೆಚ್ಚು ಕಾಲ ಸತತವಾಗಿ ರಜೆಗಳು ಲಭಿಸುತ್ತಿದ್ದವು. ಇನ್ಮುಂದೆ ಅದಕ್ಕೆ ಕಡಿವಾಣ ಬೀಳಲಿದೆ.

error: Content is protected !! Not allowed copy content from janadhvani.com