janadhvani

Kannada Online News Paper

ಸೌದಿ: ಮತಾಂತರಗೊಂಡವರ ಸಂಖ್ಯೆ ಹೆಚ್ಚಳ- 5 ವರ್ಷಗಳಲ್ಲಿ 3.5 ಲಕ್ಷ ಮಂದಿ ಇಸ್ಲಾಂ ಸ್ವೀಕಾರ

ಅವರಲ್ಲಿ ಹೆಚ್ಚಿನವರು ಇಸ್ಲಾಂ ಬಗ್ಗೆ ಕಲಿಯುವ ಮೂಲಕ ಮತ್ತು ಧರ್ಮದ ಬಗ್ಗೆ ಆಸಕ್ತಿಯನ್ನು ತೋರಿ ಸ್ವಯಂಪ್ರೇರಿತರಾಗಿ ಮತಾಂತರಗೊಂಡಿದ್ದಾರೆ.

ರಿಯಾದ್: ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸೌದಿ ಅರೇಬಿಯಾದಲ್ಲಿ 347,646 ಮಂದಿ ವಿದೇಶಿಯರು ಕಳೆದ 5 ವರ್ಷಗಳಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಇಸ್ಲಾಂಗೆ ಮತಾಂತರಗೊಂಡವರಲ್ಲಿ ಪುರುಷರು ಮತ್ತು ಮಹಿಳೆಯರೂ ಸೇರಿದ್ದಾರೆ.

ಐದು ವರ್ಷಗಳಲ್ಲಿ ಅತೀ ಹೆಚ್ಚು ಮಂದಿ ವಿದೇಶೀಯರು 2023 ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 2023 ರಲ್ಲಿ 163,319 ಮಂದಿ ಇಸ್ಲಾಂ ಸ್ವೀಕರಿಸಿದ್ದಾರೆ, 2022 ರಲ್ಲಿ 93,899 ಮಂದಿ, 2021 ರಲ್ಲಿ 27,333 ಮಂದಿ, 2020 ರಲ್ಲಿ 41,441 ಮಂದಿ, 2019 ರಲ್ಲಿ 21,654 ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಒಟ್ಟು 347,646 ಮಂದಿ ವಿದೇಶಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ವ್ಯಕ್ತಪಡಿಸಿದೆ. ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಮತ್ತು ದಅ್ ವಾ ಮಾರ್ಗದರ್ಶನ ಕೇಂದ್ರ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರಲ್ಲಿ ವಿವಿಧ ಏಷ್ಯನ್, ಆಫ್ರಿಕನ್, ಯುರೋಪಿಯನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಇಸ್ಲಾಂ ಬಗ್ಗೆ ಕಲಿಯುವ ಮೂಲಕ ಮತ್ತು ಧರ್ಮದ ಬಗ್ಗೆ ಆಸಕ್ತಿಯನ್ನು ತೋರಿ ಸ್ವಯಂಪ್ರೇರಿತರಾಗಿ ಮತಾಂತರಗೊಂಡಿದ್ದಾರೆ.

ಅಂತಹವರಿಗಾಗಿ ಉಪನ್ಯಾಸಗಳು, ಮಾರ್ಗದರ್ಶನ ಕಿರುಪುಸ್ತಕಗಳು, ಶೈಕ್ಷಣಿಕ ಅಧ್ಯಯನಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಇಸ್ಲಾಂ ಬಗ್ಗೆ ಕಲಿಯುವ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ದಅ್ ವಾ ರಂಗದಲ್ಲಿರುವವರು ಹೇಳುತ್ತಾರೆ.

error: Content is protected !! Not allowed copy content from janadhvani.com